ಹೊಂಡದಲ್ಲಿ ಬಿದ್ದು ಅರ್ಧ ದಿನ ಪರದಾಡಿದ ಆನೆ..ರಕ್ಷಣೆಯ ವಿಡಿಯೋ ನೋಡಿ..

ಒಡಿಶಾದಲ್ಲಿ ಕ್ಯಾರ್ ಸೈಕ್ಲೋನ್ ಅಬ್ಬರ ಜೋರಾಗಿದ್ದು ಭಾರಿ ಮಳೆಯಾಗ್ತಿದೆ‌. ಪರಿಣಾಮ ಎಲ್ಲೆಲ್ಲು ಹಳ್ಳ ಬಿದ್ದಿದೆ. ಕಾಡಾನೆಯೊಂದು ಕೆಸರುನೀರು ತುಂಬಿದ್ದ ಹಳ್ಳಕ್ಕೆ ಬಿದ್ದು ಅರ್ಧ ದಿನ ಒದ್ದಾಡಿದೆ‌. ಇದನ್ನ ನೋಡಿದ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷ್ಯ ಮುಟ್ಟಿಸಿದ್ರು. ಸ್ಥಳಕ್ಕೆ ಬಂದ ಸಿಬ್ಬಂದಿ, ಆನೆಗೆ ಹಗ್ಗ ಕಟ್ಟಿ ಹರಸಾಹಸ ಪಟ್ಟು 3 ಗಂಟೆಗಳ ಕಾರ್ಯಚರಣೆ ನಡೆಸಿ ಆನೆ ಮೇಲೆಳಲು ಸಹಾಯ ಮಾಡಿದ್ರು. ಆನೆ ಮೇಲೆಳ್ತಿದ್ದಾಗೆ ಬದುಕಿದೆ ಬಡಜೀವ ಅಂತ ಎದ್ನೋ ಬಿದ್ನೋ ಅಂತ ಓಟ ಕೀಳ್ತು. ಸುತ್ತ ನಿಂತಿದ್ದ ಜನ ಆನೆ ಬರ್ತಿದ್ದಾಗೆ ದಿಕ್ಕಾಪಾಲಾಗಿ ಓಡಿಹೋದ್ರು. ಅರಣ್ಯ ಇಲಾಕೆ ಅಧಿಕಾರಿಗಳು ಈ ವಿಡಿಯೋವನ್ನು ಟ್ವಿಟ್ಟರ್​​ನಲ್ಲಿ ಅಪ್ಲೋಡ್ ಮಾಡಿದ್ದು, ಆನೆಯ ಪರದಾಟಕ್ಕೆ ಜನ ಮರುಗಿದ್ದಾರೆ. ಅಲ್ದೆ ಆನೆಯ ರಕ್ಷಣಾ ಕಾರ್ಯಾಚರಣೆಯನ್ನ ಶ್ಲಾಘಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಮಾನವೀಯತೆಯ ಬಗ್ಗೆ ಹರ್ಷ ವ್ಯಕ್ತವಾಗ್ತಿದೆ.

https://twitter.com/Ketul1Indian/status/1187591755446640640

Contact Us for Advertisement

Leave a Reply