ತಾಲಿಬಾನಿಗಳ ‘ಸರ್ಕಾರ ಪ್ಲಾನ್’ ರೆಡಿ! ಶೀಘ್ರ ಘೋಷಣೆ ಸಾಧ್ಯತೆ

masthmagaa.com:

ತಾಲಿಬಾನಿಗಳು ಇಂದೇ ನೂತನ ಸರ್ಕಾರ ರಚಿಸೋ ಸಾಧ್ಯತೆ ಇದೆ. ಶುಕ್ರವಾರದ ಮಧ್ಯಾಹ್ನದ ಪ್ರಾರ್ಥನೆ ಬಳಿಕ ತಮ್ಮ ಸರ್ಕಾರ ಹೇಗಿರುತ್ತೆ ಅಂತ ತಾಲಿಬಾನ್ ಅನೌನ್ಸ್ ಮಾಡೋ ಸಾಧ್ಯತೆ ಇದೆ ಅಂತ ವರದಿಯಾಗ್ತಿದೆ. ಮುಖ್ಯವಾಗಿ ತಾಲಿಬಾನ್ ಪೊಲಿಟಿಕಲ್ ಆಫೀಸ್ ಚೀಫ್ ಮುಲ್ಲಾ ಬರಾದರ್ ಸರ್ಕಾರದ ನೇತೃತ್ವ ವಹಿಸಲಿದ್ದಾರೆ. ಹಾಗೇ ಈ ಹಿಂದೆ ತಾಲಿಬಾನ್ ಚೀಫ್ ಆಗಿದ್ದ ಮುಲ್ಲಾ ಓಮರ್ ಪುತ್ರ ಮುಲ್ಲಾ ಯಾಕೋಬ್ ಹಾಗೂ ತಾಲಿಬಾನ್ ನ ಚೀಫ್ ನೆಗೋಶಿಯೇಟರ್ ಶೇರ್ ಮಹಮ್ಮದ್ ಸ್ಟಾನಿಕ್‌ಜಾಯ್ ಟಾಪ್ ಥ್ರೀ ಪೊಸಿಶನ್ ಗಳಲ್ಲಿ ಇರ್ತಾರೆ ಅಂತ ವರದಿಯಾಗ್ತಿದೆ. ಈ ಮೂವರ ಮಾರ್ಗದರ್ಶನದ ಸರ್ಕಾರ ದೈನಂದಿನ ಆಗುಹೋಗು ನೋಡಿಕೊಳ್ಳುತ್ತೆ. ಆದ್ರೆ ಇವರೆಲ್ಲರ ಮೇಲೆ ತಾಲಿಬಾನ್ ಮುಖ್ಯಸ್ಥ ಹೈಬತುಲ್ಲಾ ಅಂಖುಡ್‌ಜಾದಾ ಸುಪ್ರೀಂ ಲೀಡರ್ ಥರ ಇರ್ತಾರೆ ಅಂತ ಮೂಲಗಳು ಮಾಹಿತಿ ನೀಡಿವೆ. ಇಲ್ಲಿ ಸ್ಟಾನಿಕ್‌ಜಾಯ್ ಬಗ್ಗೆ ನಾವು ಈ ಹಿಂದೆ ಕೂಡ ಮಾಹಿತಿ ಕೊಟ್ಟಿದ್ವಿ, ಈತನಿಗೆ ಭಾರತದ ಅನ್ನದ, ಶಿಕ್ಷಣದ ಋಣ ಇದೆ. ಈ ಹಿಂದೆ ಈತ ಅಫ್ಘಾನಿಸ್ತಾನ ಸೇನೆಯಲ್ಲಿದ್ದಾಗ ಭಾರತದ ಡೆಹ್ರಾಡೂನ್ ನಲ್ಲಿರೋ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಈತನಿಗೆ ಸುಮಾರು 2 ವರ್ಷ ತರಬೇತಿ ಸಿಕ್ಕಿತ್ತು. ಸೋ ಈತನ ಮಾತುಗಳು ಭಾರತದ ಬಗ್ಗೆ ಹೇಗಿರುತ್ತೆ ಅನ್ನೋ ಕುತೂಹಲ ಇದೆ. ಮೊನ್ನೆ ಕತಾರ್ ನಲ್ಲಿ ತಾಲಿಬಾನ್ ಪ್ರತಿನಿಧಿಗಳು ಭಾರತೀಯ ಅಧಿಕಾರಿಗಳನ್ನ ಭೇಟಿ ಆದಾಗಲೂ ಅಲ್ಲಿ ಈ ಸ್ಟಾನಿಕ್‌ಜಾಯೇ ಮೇನ್ ಆಗಿ ಇದ್ದಿದ್ದು ಅಂತ ವರದಿಯಾಗಿತ್ತು. ಇನ್ನು ಇಡೀ ವಿಶ್ವ ಈಗ ಅಫ್ಘಾನಿಸ್ತಾನದ ಕಡೆ ನೋಡ್ತಿದೆ. ಈ ಸಲ ಎಲ್ಲರಿಗೂ ಓಕೆ ಆಗೋ ಥರ, ಸ್ಮೂಥ್ ಸರ್ಕಾರ ಮಾಡ್ತೀವಿ ಅಂತ ತಾಲಿಬಾನಿಗಳು ತಾವು ನೀಡಿರೋ ಭರವಸೆಯನ್ನ ಉಳಿಸಿಕೊಳ್ತಾರಾ ಇಲ್ವಾ? ಮಹಿಳೆಯರ ಹಕ್ಕುಗಳ ಕಥೆ ಏನಾಗುತ್ತೆ? ಏನೆಲ್ಲಾ ರೂಲ್ಸ್ ಮಾಡ್ತಾರೆ? ಅನ್ನೋ ಕುತೂಹಲ ಇಡೀ ಜಗತ್ತಿಗಿದೆ. ಯಾಕಂದ್ರೆ ಈ ಹಿಂದೆ 1996 ರಿಂದ 2001ರ ವರೆಗೆ ಅವರ ಕ್ರೂರ ಆಳ್ವಿಕೆ ಹೇಗಿತ್ತು ಅಂತ ಜಗತ್ತು ನೋಡಿದೆ.

-masthmagaa.com

Contact Us for Advertisement

Leave a Reply