ಜೆಕ್‌ ರಿಪಬ್ಲಿಕ್‌ ಮೊರೆ ಹೋಗಿ: ನಿಖಿಲ್‌ ಗುಪ್ತಾ ಫ್ಯಾಮಿಲಿಗೆ ಸುಪ್ರೀಂ ಕೋರ್ಟ್‌ ಸೂಚನೆ!

masthmagaa.com:

ಖಲಿಸ್ತಾನಿ ಉಗ್ರ ಪನ್ನುನ್‌ ಪ್ರಕರಣ ವಿಚಾರವಾಗಿ ಜೆಕ್‌ ರಿಪಬ್ಲಿಕ್‌ ನಿಖಿಲ್‌ ಗುಪ್ತಾ ಅವ್ರನ್ನ ಅಕ್ರಮವಾಗಿ ಬಂಧಿಸಿದೆ ಅಂತ ಗುಪ್ತಾ ಫ್ಯಾಮಿಲಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಈ ಸಂಬಂಧ ಸುಪ್ರೀಂ ಕೋರ್ಟ್‌ ಗುಪ್ತಾ ಫ್ಯಾಮಿಲಿಗೆ ಜೆಕ್‌ ನ್ಯಾಯಾಲಯದ ಮೊರೆ ಹೋಗುವಂತೆ ಸೂಚಿಸಿದೆ. ಗುಪ್ತಾ ಫ್ಯಾಮಿಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ, ʻಗುಪ್ತಾ ಅವ್ರನ್ನ ಪ್ರೇಗ್‌ನಲ್ಲಿ ಬಂಧಿಸಲಾಗಿದೆ ಅವರ ಜೀವ ಅಪಾಯದಲ್ಲಿದೆ. ಈ ವಿಚಾರವಾಗಿ ಜೆಕ್‌ ಅಧಿಕಾರಿಗಳೊಂದಿಗೆ ಮಧ್ಯಸ್ಥಿಕೆ ವಹಿಸಲು ವಿದೇಶಾಂಗ ಇಲಾಖೆ ಹಾಗೂ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಡೈರೆಕ್ಷನ್‌ ನೀಡಿ ಅಂತ ಕುಟುಂಬಸ್ತರು ಮನವಿ ಮಾಡಿಕೊಂಡಿದ್ದಾರೆ. ಉಗ್ರ ಪನ್ನುನ್‌ ಹತ್ಯೆ ಸಂಚು ಆರೋಪವನ್ನ ಹೊತ್ತಿರೋ ನಿಖಿಲ್‌ ಗುಪ್ತಾ ಕಳೆದ ಜೂನ್‌ನಲ್ಲೇ ಅರೆಸ್ಟ್‌ ಆಗಿ ಜೆಕ್‌ ರಿಪಬ್ಲಿಕ್‌ ಜೈಲ್‌ನಲ್ಲಿ ಬಂಧಿಯಾಗಿದ್ದಾರೆ. ಇನ್ನೊಂದ್ಕಡೆ ʻಖಲಿಸ್ತಾನ್‌ ಚಳುವಳಿಗೆʼ ನಾವು ಸಪೋರ್ಟ್‌ ಮಾಡಲ್ಲ ಅಂತ ಪ್ರಮುಖ ಇಂಡೋ-ಅಮೆರಿಕನ್‌ ಸಿಖ್‌ ನಾಯಕರೊಬ್ರು ಹೇಳಿಕೆ ನೀಡಿದ್ದಾರೆ. ʻಸಿಖ್ಸ್‌ ಆಫ್‌ ಅಮೆರಿಕʼ ಸಂಘಟನೆಯ ಜಸ್ಸಿ ಸಿಂಗ್‌ ಅವ್ರು ಇಂಟರ್‌ವ್ಯೂ ಒಂದ್ರಲ್ಲಿ ಮಾತನಾಡೋವಾಗ ಈ ರೀತಿ ಹೇಳಿದ್ದಾರೆ. ʻಕಳೆದ ಸರ್ಕಾರಕ್ಕೆ ಹೋಲಿಸಿದ್ರೆ ಮೋದಿ ಸರ್ಕಾರ ಸಿಖ್‌ ಸಮುದಾಯಕ್ಕೆ ಸಾಕಷ್ಟು ಒಳ್ಳೆ ಕೆಲಸ ಮಾಡಿದೆ. ಇದ್ರ ಬಗ್ಗೆ ಯಾವ್ದೇ ರೀತಿ ಡೌಟ್‌ ಇಲ್ಲ. ಆದ್ರೆ ಇನ್ನೂ ಹಲವು ಸಿಖ್‌ರ ಸಮಸ್ಯೆಗಳಿಗೆ ಮೋದಿ ಸರ್ಕಾರ ಸ್ಪಂದಿಸ್ಬೇಕಿದೆ. ಯಾವ್ದೇ ಮಧ್ಯವರ್ತಿಗಳು ಇನ್ವಾಲ್ವ್‌ ಆಗದೇ ಭಾರತ ಮತ್ತು ವಿಶ್ವದ ಸಿಖ್‌ ಸಮುದಾಯದೊಂದಿಗೆ ಮೋದಿಯವ್ರು ನೇರವಾಗಿ ಮಾತನಾಡ್ಬೇಕುʼ ಅಂತ ಹೇಳಿದ್ದಾರೆ. ಈ ವೇಳೆ ʻಹೆಚ್ಚಿನ ಸಿಖ್‌ರು ಖಲಿಸ್ತಾನ್‌ ಚಳುವಳಿಗೆ ಸಪೋರ್ಟ್‌ ಮಾಡಲ್ಲ. ಎಲ್ಲೋ ಭಾರತ ಮತ್ತು ಅಮೆರಿಕದ ಅಲ್ಪಸ್ವಲ್ಪ ಜನರು ಈ ಚಳುವಳಿಗೆ ಸಪೋರ್ಟ್‌ ಮಾಡ್ತಾರೆ ಅಷ್ಟೇʼ ಅಂತ ಹೇಳಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply