ಉತ್ತರ ಪ್ರದೇಶದ 900 ಫ್ಲಾಟ್​​ನ ಕಟ್ಟಡ ಧ್ವಂಸಗೊಳಿಸಲು ಸುಪ್ರೀಂ ಆದೇಶ!

masthmagaa.com:

ಉತ್ತರ ಪ್ರದೇಶದ ನೋಯ್ಡಾದಲ್ಲಿ ಕಾನೂನು ಉಲ್ಲಂಘಿಸಿ ಕಟ್ಟಲಾಗಿದ್ದ ಎರಡು ಗಗನ ಚುಂಬಿ ಕಟ್ಟಡಗಳನ್ನು ಧ್ವಂಸಗೊಳಿಸಬೇಕು ಅಂತ ಸುಪ್ರೀಂಕೋರ್ಟ್ ಹೇಳಿದೆ. ಈ ಹಿಂದೆ 2014ರ ಏಪ್ರಿಲ್​​ನಲ್ಲಿ ಅಲಹಾಬಾದ್ ಹೈಕೋರ್ಟ್​ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್​ ಎತ್ತಿ ಹಿಡಿದಿದೆ. ಅಂದಹಾಗೆ 40 ಮಹಡಿ ಇರೋ ಕಟ್ಟಡ ಇದಾಗಿದ್ದು, ಇದ್ರಲ್ಲಿ 900 ಫ್ಲಾಟ್​​ಗಳಿವೆ. ಇದನ್ನು ರಿಯಲ್ ಎಸ್ಟೇಟ್ ಸಂಸ್ಥೆ ಸೂಪರ್​​ಟೆಕ್ ನಿರ್ಮಾಣ ಮಾಡಿತ್ತು. ಇದ್ರಲ್ಲಿ ಫ್ಲಾಟ್ ಖರೀದಿಸಿರೋ ಪ್ರತಿಯೊಬ್ಬರಿಗೂ 2 ತಿಂಗಳ ಒಳಗೆ ಪರಿಹಾರ ನೀಡಬೇಕು. ಮತ್ತು ಕಟ್ಟಡ ಡೆಮಾಲಿಶ್ ವೆಚ್ಚವನ್ನು ಕೂಡ ಸೂಪರ್​ಟೆಕ್ ಸಂಸ್ಥೆ ನೀಡಬೇಕು ಅಂತ ಆದೇಶದಲ್ಲಿ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply