ಚುನಾವಣಾ ಬಾಂಡ್‌ ವಿಚಾರವಾಗಿ ಪುನಃ SBIಗೆ ಸುಪ್ರೀಂ ತರಾಟೆ!

masthmagaa.com:

ಲೋಕಸಭೆ ಚುನಾವಣೆಗೆ ಕೆಲ ವಾರ ಬಾಕಿ ಇರುವ ನಡುವೆಯೇ ಚುನಾವಣಾ ಬಾಂಡ್‌ ದೇಶದಲ್ಲಿ ಕೋಲಾಹಲ ಸೃಷ್ಟಿಸಿದೆ. ಚುನಾವಣಾ ಬಾಂಡ್‌ ಮಾಹಿತಿಯನ್ನ ಎಲೆಕ್ಷನ್‌ ಕಮಿಷನ್‌ ಈಗಾಗಲೇ ಬಹಿರಂಗಪಡಿಸಿದೆ. ಅದ್ರಲ್ಲಿ ಯಾವ ಕಂಪನಿ ರಾಜಕೀಯ ಪಕ್ಷಗಳಿಗೆ ಎಷ್ಟು ಡೊನೇಟ್‌ ಮಾಡಿದೆ. ಯಾವ ಪಕ್ಷ ಎಷ್ಟು ಪಡೆದಿದೆ ಅನ್ನೋದ್ರ ಬಗ್ಗೆ ಈಗಾಗಲೇ ನಾವು ವಿಸ್ತೃತ ವರದಿ ಮಾಡಿದ್ದೀವಿ. ನೀವದನ್ನ ಚೆಕ್‌ ಮಾಡ್ಬಹುದು. ಈಗ ಈ ವಿಚಾರವಾಗಿ ವಿಪಕ್ಷಗಳು ಆಡಳಿತ ಬಿಜೆಪಿ ಸರ್ಕಾರದ ಮೇಲೆ ಟೀಕೆಗಳ ಸುರಿಮಳೆ ಸುರಿಸ್ತಿವೆ. AICC ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಪ್ರಧಾನಿಗಳು “ನ ಖಾವುಂಗಾ ನ ಖಾನೇ ದೂಂಗಾ” ಅಂತ ಹೇಳ್ತಾರೆ. ಆದ್ರೆ ಸುಪ್ರೀಂ ಕೋರ್ಟ್‌ ಬಿಜೆಪಿ ಬಂಡವಾಳ ಬಹಿರಂಗ ಮಾಡಿದೆ. ಚುನಾವಣಾ ಬಾಂಡ್‌ಗಳಿಂದ ಬಿಜೆಪಿ ಹೇಗೆ ದುಡ್ಡು ಮಾಡಿದೆ ಅಂತ ಎಕ್ಸ್‌ಪೋಸ್‌ ಮಾಡಿದೆ. ಬಾಂಡ್‌ ಮೂಲಕ ಹಣ ನೀಡಿರೋದ್ರಲ್ಲಿ ಹಲವಾರು ಸಂಶಯಾಸ್ಪದ ಕಂಪನಿಗಳಿವೆ. ಇ.ಡಿ, ಐಟಿ ದಾಳಿಯಲ್ಲಿರೋ ಕಂಪನಿಗಳು ಹಣ ನೀಡಿವೆ. ಮೋದಿ ಸರ್ಕಾರ ಇವರ ಮೇಲೆ ಒತ್ತಡ ಹಾಕಿ ಹಣ ಪಡೆದಿದೆ. ಹೀಗಾಗಿ ಚುನಾವಣಾ ಬಾಂಡ್‌ ದೇಣಿಗೆ ಬಗ್ಗೆ ವಿಶೇಷ ತನಿಖೆಯಾಗ್ಬೇಕು. ತನಿಖೆ ಕಂಪ್ಲೀಟ್‌ ಆಗೋವರೆಗೂ ಬಿಜೆಪಿಯ ಬ್ಯಾಂಕ್‌ ಅಕೌಂಟ್‌ನ್ನ ಫ್ರೀಜ್‌ ಮಾಡ್ಬೇಕುʼ ಅಂತ ಡಿಮಾಂಡ್‌ ಮಾಡಿದ್ದಾರೆ. ಅಂದ್ಹಾಗೆ SBI ನೀಡಿರೋ ಬಾಂಡ್‌ ವಿವರದ ಲಿಸ್ಟ್‌ನಲ್ಲಿ ಟಾಪ್‌ 30 ಕಂಪನಿಗಳ ಪೈಕಿ ಸುಮಾರು 15ಕ್ಕೂ ಅಧಿಕ ಕಂಪನಿಗಳ ಮೇಲೆ ಈ ಹಿಂದೆ ED, CBI ಮತ್ತು IT ದಾಳಿ ನಡೆದಿದೆ. ಇನ್ನು ಕೆಲ ಕಂಪನಿಗಳ ಆಸ್ತಿಗಳನ್ನ ED ವಶಕ್ಕೆ ಪಡೆದಾಗ ಕೂಡ ಕಂಪನಿಗಳು ಬಾಂಡ್‌ ಪರ್ಚೇಸ್‌ ಮಾಡಿವೆ. ಈ ವಿಚಾರ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದ್ರ ಕುರಿತು ಈಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ರಿಯಾಕ್ಟ್‌ ಮಾಡಿದ್ದು ʻತನಿಖಾ ಸಂಸ್ಥೆ ನಡೆಸಿರೋ ದಾಳಿ ಮತ್ತು ಚುನಾವಣಾ ಬಾಂಡ್‌ಗಳನ್ನ ಖರೀದಿ ಮಾಡಿರೋ ಕಂಪನಿಗಳ ನಡುವೆ ಈ ರೀತಿ ಲಿಂಕ್‌ ಇದೆ ಅನ್ನೋದು ಕೇವಲ ಊಹೆಗಳು…ಕಾಲ್ಪನಿಕವಷ್ಟೆʼ ಅಂದಿದ್ದಾರೆ.

ಚುನಾವಣಾ ಬಾಂಡ್‌ ವಿಚಾರವಾಗಿ ಇದೀಗ ಸುಪ್ರೀಂ ಕೋರ್ಟ್‌ ಪುನಃ SBIನ ತರಾಟೆಗೆ ತೆಗೆದ್ಕೊಂಡಿದೆ. ಚುನಾವಣಾ ಬಾಂಡ್‌ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ ಅಂತ ಕಿಡಿಕಾರಿದೆ. ಈ ಮಾಹಿತಿಯಲ್ಲಿ ಚುನಾವಣಾ ಬಾಂಡ್‌ ಮೇಲಿದ್ದ ವಿಶೇಷ ಕೋಡ್‌ ನಂಬರ್ಸ್‌ ಬಹಿರಂಗ ಮಾಡಿಲ್ಲ ಅಂತ SBIಗೆ ನೋಟಿಸ್‌ ನೀಡಿದೆ. ಅಲ್ದೇ ʻಈ ಅಚಾತುರ್ಯ ಯಾಕ್‌ ಆಯ್ತು ಅಂತ ಸ್ವಲ್ಪ ಎಕ್ಸ್‌ಪ್ಲೇನ್‌ ಮಾಡಿʼ ಅಂತ ಮಾರ್ಚ್‌ 18ಕ್ಕೆ ವಿಚಾರಣೆಗೆ ಕರೆದಿದೆ.

-masthmagaa.com

Contact Us for Advertisement

Leave a Reply