ಉತ್ತರದಲ್ಲಿ ಮಿತಿಮೀರಿದ ವಾಯುಮಾಲಿನ್ಯ: ಕ್ರಮಗಳ ಕುರಿತು ಸ್ಪಷ್ಟನೆ ಕೇಳಿದ ಸುಪ್ರೀಂ

masthmagaa.com:

ದೆಹಲಿ, ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್‌ ಮತ್ತು ರಾಜಸ್ಥಾನ್‌ಗಳಲ್ಲಿ ಹೆಚ್ಚಾಗ್ತಿರೊ ವಾಯುಮಾಲಿನ್ಯ ಕುರಿತು, ಈ ರಾಜ್ಯಗಳು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್‌ ಕೇಳಿದೆ. ದೆಹಲಿಯಲ್ಲಿ ಗಾಳಿಯ ಗುಣಮಟ್ಟ ದಿನೇ ದಿನೇ ಹಾಳಾಗ್ತಿದೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಸರ್ಕಾರಗಳು ಈ ಬಗ್ಗೆ ಏನು ಕ್ರಮ ಕೈಗೊಂಡಿವೆ ಅಂತ ಸುಪ್ರೀಂ ಎಲ್ಲಾ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳನ್ನ ಕೇಳಿದೆ. ದೆಹಲಿಯ ಈ ಪರಿಸ್ಥಿತಿಗೆ ಮುಖ್ಯ ಕಾರಣ ಈ ರಾಜ್ಯಗಳಲ್ಲಿ ರೈತರು ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚೋದು. ಇದರಿಂದ್ಲೆ ವ್ಯಕ್ತಿಯೊಬ್ಬರು, ʻಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡ್ಬೇಕು. ಕೃಷಿ ತ್ಯಾಜ್ಯ ವಿಲೇವಾರಿ ಜೊತೆಗೆ ಪ್ರತಿ ರಾಜ್ಯಗಳಲ್ಲು ಸ್ಮಾಗ್‌ ಟವರ್ ಅಳವಡಿಕೆ, ಗಿಡಗಳನ್ನ ನೆಡೋದು, ಕೈಗೆಟುಕೊ ಸಾರಿಗೆ ವ್ಯವಸ್ಥೆ ಕಲ್ಪಿಸೋದು ಮತ್ತು ಈ ಸಿಚುಯೇಶನ್‌ನ ಬಗೆಹರಿಸೋಕೆ ಕಮಿಟಿ ಒಂದನ್ನ ರಚಿಸಲು ಸುಪ್ರೀಂ ಆದೇಶ ನೀಡ್ಬೇಕುʼ ಅಂತ ಅರ್ಜಿ ಸಲ್ಲಿಸಿದ್ರು. ಈ ಬೆನ್ನಲ್ಲೆ ಸುಪ್ರೀಂ ಕೋರ್ಟ್‌ ಎಲ್ಲಾ ರಾಜ್ಯಗಳಿಂದ ವರದಿ ಕೇಳಿದೆ.

-masthmagaa.com

Contact Us for Advertisement

Leave a Reply