ಜಪಾನ್, ತೈವಾನ್​​ನಲ್ಲಿ ಕಿರಿಕ್ ಮುಂದುವರಿಸಿದ ಚೀನಾ!

masthmagaa.com:

ಚೀನಾದ್ದು ಎನ್ನಲಾದ ಜಲಾಂತರ್ಗಾಮಿ ನೌಕೆಯೊಂದು ಜಪಾನ್ ದಕ್ಷಿಣ ಭಾಗದ ಸಾಗರದಲ್ಲಿ ಪತ್ತೆಯಾಗಿದೆ ಅಂತ ಜಪಾನ್ ರಕ್ಷಣಾ ಸಚಿವಾಲಯ ಹೇಳಿದೆ. ನಮ್ಮ ನೌಕಾಪಡೆ ಕಾಗೋಶಿಮಾ ಪ್ರಾಂತ್ಯದ ಭಾಗವಾದ ಅಮಾಮಿ ಒಶಿಮಾ ದ್ವೀಪದ ಬಳಿ ನಮ್ಮ ಜಲಪ್ರದೇಶದ ಹತ್ತಿರದಲ್ಲೇ ಜಲಾಂತರ್ಗಾಮಿ ನೌಕೆ ಹೋಗ್ತಿರೋದನ್ನು ಗಮನಿಸಿದೆ. ಹೀಗೆ ಮುಂದುವರಿದ ಸಬ್​ಮರೀನ್​​, ಯೋಕೋಆಟೆ ದ್ವೀಪಕ್ಕೆ ಹತ್ತಿರದಲ್ಲಿ ಹಾದು ಮುಂದೆ ಸಾಗಿದೆ ಅಂತ ಮಾಹಿತಿ ನೀಡಿದೆ. ಅಂದಹಾಗೆ ಇತ್ತೀಚೆಗೆ ಇದೇ ಭಾಗದಲ್ಲಿ ಚೀನಾದ ಯುದ್ಧನೌಕೆ ಕೂಡ ಹಾದುಹೋಗಿತ್ತು. ಅಂದಹಾಗೆ ಕಳೆದ ವರ್ಷಗಳಲ್ಲಿ ಹಲವಾರು ಬಾರಿ ಚೀನಾ ಈ ರೀತಿ ಅಕ್ರಮವಾಗಿ ಜಪಾನ್ ಜಲಗಡಿಯಲ್ಲಿ ನುಸುಳಿರೋ ಬಗ್ಗೆ ಜಪಾನ್ ಆರೋಪಿಸಿದೆ. ಆದ್ರೆ ಈ ಆರೋಪಕ್ಕೆ ಚೀನಾದಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ.

ಮತ್ತೊಂದ್ಕಡೆ ತೈವಾನ್​​​ನಲ್ಲೂ ಚೀನಾ ತನ್ನ ಮೂಗು ತೂರಿಸೋ ಬುದ್ಧಿ ಮುಂದುವರಿಸಿದೆ. ಚೀನಾದ ಪೀಪಲ್ಸ್ ಲಿಬರೇಷನ್ ಏರ್​ಫೋರ್ಸ್​​ನ ಶಾನ್​​ಕ್ಸಿ ವೈ 8 ತೈವಾನ್​​ನ ಏರ್​​ಡಿಫೆನ್ಸ್​ ಐಡೆಂಟಿಫಿಕೇಶನ್ ಝೋನ್ ಪ್ರವೇಶಿಸಿದೆ. ಸೆಪ್ಟೆಂಬರ್ 2ರಂದು ಹೊರತುಪಡಿಸಿ ಈ ತಿಂಗಳು ಪ್ರತಿದಿನವೂ ಚೀನಾದ ಯುದ್ಧ ವಿಮಾನಗಳು ನಮ್ಮ ಏರ್​ಡಿಫೆನ್ಸ್​ ಐಡೆಂಟಿಫಿಕೇಶನ್ ಝೋನ್ ಪ್ರವೇಶಿಸುತ್ತಲೇ ಇವೆ ಅಂತ ತೈವಾನ್ ನ್ಯಾಷನಲ್ ಡಿಫೆನ್ಸ್ ಮಿನಿಸ್ಟ್ರಿ ಮಾಹಿತಿ ನೀಡಿದೆ. ಕೂಡಲೇ ನಾವು ಕೂಡ ರೇಡಿಯೋ ವಾರ್ನಿಂಗ್ ನೀಡಿದ್ದಲ್ಲದೇ ತನ್ನ ಯುದ್ಧವಿಮಾನವನ್ನು ಕಳುಹಿಸಿದ್ವಿ. ಜೊತೆಗೆ ಏರ್ ​​​ಡಿಫೆನ್ಸ್ ಮಿಸೈಲ್ ಸಿಸ್ಟಂ ನಿಯೋಜಿಸಿದ್ದೇವೆ ಅಂತ ತೈವಾನ್ ತಿಳಿಸಿದೆ.

-masthmagaa.com

Contact Us for Advertisement

Leave a Reply