ಭಾರಿ ಮಳೆ ಬಳಿಕ ಆಸ್ಟ್ರೇಲಿಯಾಗೆ ಹೊಸದೊಂದು ಆಪತ್ತು!

masthmagaa.com:

ಆಸ್ಟ್ರೇಲಿಯಾದಲ್ಲಿ ಶತಮಾನದ ಮಳೆಗೆ ಹಲವೆಡೆ ಪ್ರವಾಹ ಸಂಭವಿಸಿ, ಜನ ಪರದಾಡ್ತಿದ್ದಾರೆ. ಇದೀಗ ಪ್ರವಾಹದ ಬಳಿಕ ಭಯಾನಕ ಕ್ರಿಮಿಕೀಟಗಳ ಆತಂಕ ಜನರನ್ನು ಕಾಡಲಿದೆ ಅಂತ ಆಸ್ಟ್ರೇಲಿಯಾದ ರೆಪ್ಟೈಲ್ ಪಾರ್ಕ್ ಎಚ್ಚರಿಸಿದೆ. ಹತ್ತತ್ರ ಒಂದು ವಾರದ ಭಾರಿ ಮಳೆ ಬಳಿಕ ಇವತ್ತು ಆಸ್ಟ್ರೇಲಿಯಾದ ಸಿಡ್ನಿ ಮತ್ತು ನ್ಯೂ ಸೌಥ್ ವೇಲ್ಸ್​ ಜನ ಸೂರ್ಯನ ಕಿರಣಗಳನ್ನು ನೋಡ್ತಿದ್ದಾರೆ. ಈ ನಡುವೆಯೇ ಹೊಸ ಆಪತ್ತು ಎದುರಾಗಿದೆ. ಮಳೆಯಿಂದಾಗಿ ಇಲ್ಲಿನ ಅತ್ಯಂತ ವಿಷಕಾರಿಯಾದ ಫನಲ್ ವೆಬ್ ಸ್ಪೈಡರ್​​ಗಳು ಸುರಕ್ಷಿತ ಜಾಗದತ್ತ ಬರುತ್ತಿವೆ.. ಅಂದ್ರೆ ಪ್ರವಾಹದ ಜಾಗ ಬಿಟ್ಟು ಜನವಸತಿ ಇರುವ ಪ್ರದೇಶಗಳ ಕಡೆಗೆ ನುಗ್ಗುತ್ತಿವೆ ಅಂತ ಎಚ್ಚರಿಸಲಾಗಿದೆ. ಜೇಡಗಳು ಪ್ರವಾಹದಿಂದ ಎಸ್ಕೇಪ್ ಆಗಿ ಓಡುತ್ತಿರುವ ವಿಡಿಯೋಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇವುಗಳ ಪೈಕಿ ಫನಲ್ ವೆಬ್ಸ್ ಅನ್ನೋ ಜೇಡ ಅತಿ ಭಯಂಕರವಾದ ವಿಷಕಾರಿಯಾಗಿದ್ದು, ಈ ಹಿಂದೆ ಇವುಗಳು ಕಚ್ಚಿ 13 ಮಂದಿ ಜೀವ ಕೂಡ ಬಿಟ್ಟಿದ್ರು.

-masthmagaa.com

Contact Us for Advertisement

Leave a Reply