ಇರಾಕ್‌: ಸ್ವಿಡನ್‌ ರಾಯಭಾರಿ ಕಚೇರಿಗೆ ಬೆಂಕಿ ಹಾಕಿ ಪ್ರತಿಭಟನೆ

masthmagaa.com:

ಇತ್ತೀಚೆಗೆ ಸ್ವೀಡನ್‌ನ ಮಸೀದಿ ಒಂದ್ರ ಮುಂದೆ ಮುಸ್ಲಿಂರ ಪವಿತ್ರ ಗ್ರಂಥ ಕುರಾನ್‌ ಸುಟ್ಟು ಪ್ರತಿಭಟನೆ ಮಾಡಿದ್ದು, ಜಗತ್ತಿನಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಈ ಕೃತ್ಯವನ್ನ ವಿರೋಧಿಸಿ ಇರಾಕ್‌ನ ಬಗ್ದಾದ್‌ನಲ್ಲಿರುವ ಸ್ವೀಡನ್‌ ರಾಯಭಾರಿ ಕಚೇರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಗಿದೆ. ಆದ್ರೆ ಬೆಂಕಿ ಹಾಕಿರೋ ಸಮಯದಲ್ಲಿ ಸ್ವಿಡನ್‌ ಅಧಿಕಾರಿಗಳು ಕಚೇರಿಯಲ್ಲಿ ಇದ್ರಾ ಇಲ್ವಾ ಅನ್ನೋದ್ರ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಯಾವುದೇ ಸಿಬ್ಬಂದಿಗೆ ಹಾನಿಯಾಗಿಲ್ಲ ಎನ್ನಲಾಗಿದೆ. ಪ್ರತಿಭಟನಾ ನಿರತ ನೂರಾರು ಜನರು ಸ್ವೀಡನ್‌ ರಾಯಭಾರಿ ಕಚೇರಿಗೆ ಬೆಂಕಿ ಹಾಕ್ತಿರೋ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡ್ತಿವೆ.

-masthmagaa.com

Contact Us for Advertisement

Leave a Reply