ಯಪ್ಪಾ! ಕೊರೋನಗೆ ಆಸ್ಟ್ರೇಲಿಯನ್ಸ್ ಯಾವ ರೇಂಜಿಗೆ ರಿಯಾಕ್ಟ್ ಮಾಡ್ತಿದಾರೆ ನೋಡಿ!

masthmagaa.com:

ಹಾಗೇ ಆಸ್ಟ್ರೇಲಿಯಾದ ಸಿಡ್ನಿಯಲ್ಲೂ ಮತ್ತೆ ಒಂದು ತಿಂಗಳು ಲಾಕ್ಡೌನ್ ಕಂಟಿನ್ಯೂ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಒಂದು ತಿಂಗಳಿಂದ ಲಾಕ್ಡೌನ್ ಇದೆ. ಆದ್ರೆ ಕೊರೋನ ಹೊಸ ಪ್ರಕರಣಗಳ ಗ್ರಾಫ್ ಬೆಂಡ್ ಮಾಡೋಕೆ ಸಾಧ್ಯಾನೇ ಆಗಿಲ್ಲ. ಅಂದಹಾಗೆ ಆಸ್ಟ್ರೇಲಿಯನ್ನರು ನಮಗೆ ಹೋಲಿಸಿದ್ರೆ ಎಷ್ಟು ಓವರ್ ರಿಯಾಕ್ಟ್ ಮಾಡುತ್ತಾರೆ ಇಂಥದ್ದಕ್ಕೆಲ್ಲ ಅಂತ ಅರ್ಥ ಆಗಬೇಕು ಅಂದ್ರೆ ಈಗ ಹೇಳೋದನ್ನ ಚೂರು ಮೈಂಡ್ ಗೆ ತಗೋಳಿ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಜೂನ್ 28ನೇ ತಾರೀಕು 12 ಹೊಸ ಕೊರೋನ ಸೋಂಕಿನ ಕೇಸುಗಳು ಬಂದಾಗ ಲಾಕ್ಡೌನ್ ಆರಂಭ ಮಾಡಲಾಗಿತ್ತು. ಅದೇ ಬಾಳ ದೊಡ್ಡದು ಅಂತ. ಆದ್ರೀಗ ಇಂದು ಮತ್ತೆ 177 ಕೇಸುಗಳು ಬಂದಿವೆ. ಸೋ 12ಕ್ಕೆ ಹೋಲಿಸಿದ್ರೆ 177 ದೊಡ್ಡದೇ ಅಲ್ವಾ.? ಸೋ ಕೊರೋನಾ ಗ್ರಾಫ್ ಕೆಳಗೆ ಇನ್ನೂ ಬಗ್ಗಿಲ್ಲ. ನಾವು ಬಗ್ಸೇ ಬಗ್ಗಿಸ್ತೀವಿ ಅಂತ ಪಣ ತೊಟ್ಟು ಮತ್ತೆ ಲಾಕ್ ಡೌನ್ ಮಾಡಿದ್ದಾರೆ. ಎಲ್ಲಾ ಬಂದ್ ಮಾಡಿ ಕೂತರೂ ದಿನ ದೂಡಲು ಶಕ್ತಿ ಇರೋ ದೇಶಗಳು ಮಾತ್ರ, 10,12, 100, 200 ಕೇಸಿಗೂ ಬಹಳ ಮಹತ್ವ ಕೊಟ್ಟು ತಿಂಗಳಾನುಗಟ್ಟಲೇ ಲಾಕ್ ಡೌನ್ ಮಾಡಲು ಸಾಧ್ಯ.!

-masthmagaa.com

Contact Us for Advertisement

Leave a Reply