ಕಾಶ್ಮೀರಕ್ಕೆ ಬೆಂಬಲ ನೀಡ್ತೀವಿ ಎಂದ ಪಾಕಿಸ್ಥಾನ ಸೇನಾ ಮುಖ್ಯಸ್ಥ!

masthmagaa.com:

ಬಾಯಿ ತೆರೆದ್ರೆ, ಕಾಶ್ಮೀರ ಕಾಶ್ಮೀರ ಅಂತ ಜಪ ಮಾಡೋ ಪಾಕಿಸ್ತಾನ ಇದೀಗ ಪುನಃ ಅದೇ ವಿಚಾರ ಎತ್ತಿದೆ. ಪಾಕ್‌ ಸೇನಾ ಮುಖ್ಯಸ್ಥ ಸೈಯದ್‌ ಅಸಿಮ್‌ ಮುನೀರ್‌, ʻಕಾಶ್ಮೀರಕ್ಕೆ ನಾವು ನೈತಿಕ, ರಾಜಕೀಯ ಮತ್ತು ರಾಜತಾಂತ್ರಿಕ ಸಪೋರ್ಟ್‌ ನೀಡ್ತೇವೆ’ ಅಂತ ಕನವರಸಿದ್ದಾರೆ. ಅಲ್ಲದೇ ಪಾಕ್‌ ಮಾತಿಗೆ ಯಾರೂ ನಯಾ ಪೈಸಾ ಕಿಮ್ಮತ್ತು ಕೊಡದೇ ಇರೋದಕ್ಕೆ, “ಕಾಶ್ಮೀರ ವಿಚಾರದಲ್ಲಿ ಜಗತ್ತಿನ ಮೌನ ಗಾಢವಾಗಿದೆ” ಅಂದಿದ್ದಾರೆ. ಜೊತೆಗೆ 2019ರಲ್ಲಿ ಭಾರತ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ನೆನಪಿಸ್ಕೊಂಡು, ʻಭಾರತ ನಮ್ಮ ಪ್ರಮುಖ ಎದುರಾಳಿ’ ಅಂತ ಕರೆದಿದ್ದಾರೆ. ಅಂದ್ಹಾಗೆ ಪಾಕಿಸ್ತಾನದ ಏರ್‌ ಫೋರ್ಸ್‌ ಅಕಾಡೆಮಿಯಲ್ಲಿ ಮಾತನಾಡೋವಾಗ ಅಸಿಮ್‌ ಮುನೀರ್‌ ಈ ರೀತಿ ಹೇಳಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply