ಟಿ20 ವಿಶ್ವಕಪ್: ಭಾರೀ ಮುಖಭಂಗ ತಪ್ಪಿಸಿಕೊಂಡ‌ ಆಸೀಸ್‌, ರಷೀದ್‌ ಖಾನ್‌ ಭರ್ಜರಿ ಆಟ

masthmagaa.com:

ತನ್ನ ತವರಿನಲ್ಲೇ ನಡೀತಾ ಇರೋ T20ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಸ್ವಲ್ಪದ್ರಲ್ಲೇ ಭಾರೀ ಮುಖಭಂಗವನ್ನ ತಪ್ಪಿಸಿಕೊಂಡಿದೆ. ಅಲ್ಲಿನ ಅಡಿಲೇಡ್‌ನಲ್ಲಿ ಅಪ್ಘಾನಿಸ್ತಾನ ವಿರುದ್ದ ನಡೆದ ಮ್ಯಾಚ್‌ನಲ್ಲಿ ಕೇವಲ ನಾಲ್ಕು ರನ್‌ಗಳಿಂದ ಗೆದ್ದಿದೆ. ಈ ಮೂಲಕ ಅಪ್ಘಾನಿಸ್ತಾನದ ವಿರುದ್ಧ ಸೋಲೋದಷ್ಟೇ ಅಲ್ಲದೇ ತವರಿನಲ್ಲಿ ಗ್ರೂಪ್‌ ಹಂತದಿಂದಲೇ ವರ್ಲ್ಡ್‌ಕಪ್‌ನಿಂದ ಔಟ್‌ ಆಗೋದನ್ನ ತಪ್ಪಿಸಿಕೊಂಡಿದೆ. ಮೊದಲು ಬ್ಯಾಟ್‌ ಮಾಡಿದ ಆಸೀಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ ಕಳ್ಕೊಂಡು 1 ತಂಡ ಅಪ್ಘಾನ್‌ಗೆ 168ರನ್‌ ಗಳಿಸಿತ್ತು. ಇದನ್ನ ಚೇಸ್‌ ಮಾಡಲು ಕಣಕ್ಕಿಳಿದ ಅಫ್ಘಾನ್‌. ಆರಂಭದಲ್ಲಿ ಚೆನ್ನಾಗಿ ಆಡಿದ್ರು 17 ಓವರ್‌ಗೆ ಬರೊವಷ್ಟ್ರಲ್ಲಿ 120 ರನ್‌ 6 ವಿಕೆಟ್‌ ಕಳ್ಕೊಂಡು ಹೀನಾಯ ಸ್ಥಿತಿಯಲ್ಲಿತ್ತು. ಕೊನೇ ಮೂರು ಓವರ್‌ನಲ್ಲಿ ಅಪ್ಘಾನ್‌ಗೆ 49 ರನ್‌ ಬೇಕಿತ್ತು. ಈ ಸಮಯದಲ್ಲಿ ಭರ್ಜರಿಯಾಗಿ ಬ್ಯಾಟ್‌ ಬೀಸಿದ ರಷೀದ್‌ ಖಾನ್‌ 23 ಬಾಲ್‌ಗೆ 48 ರನ್‌ ಸಿಡಿಸಿದ್ದಾರೆ. ಆದ್ರು ಕೂಡ ಕೊನೆಯಲ್ಲಿ ಆಸ್ಟ್ರೇಲಿಯಾ 4 ರನ್‌ಗಳಿಂದ ಪಂದ್ಯ ಗೆದ್ದಿದೆ. ಈ ಮೂಲಕ ಸೆಮೀಸ್‌ ಆಸೆಯನ್ನ ಜೀವಂತವಾಗಿ ಇಟ್ಕೊಂಡಿದೆ. ನಾಳೆ ಇಂಗ್ಲೆಂಡ್‌-ಶ್ರೀಲಂಕಾ ಪಂದ್ಯ ಕ್ರೂಷಿಯಲ್‌ ಆಗಿದ್ದು, ಇಂಗ್ಲೆಂಡ್‌ ಸೋತ್ರೆ ಆಸ್ಟ್ರೇಲಿಯಾ ಸೆಮಿಫೈನಲ್‌ ತಲುಪಬಹುದಾಗಿದೆ.

-masthmagaa.com

Contact Us for Advertisement

Leave a Reply