ICC ಅತ್ಯಮೂಲ್ಯ ತಂಡದಲ್ಲಿ ಭಾರತೀಯ ಕ್ರಿಕೆಟಿಗರೇ ಇಲ್ಲ!

masthmagaa.com:

ಟಿ-20 ವಿಶ್ವಕಪ್​ ಮುಗಿದ ಬೆನ್ನಲ್ಲೇ ಐಸಿಸಿ ಮೋಸ್ಟ್​ ವ್ಯಾಲ್ಯೂಯೇಬಲ್​ ಟೀಮ್​ ಅನ್ನ ಘೋಷಿಸಿದೆ. ಇದರಲ್ಲಿ ಭಾರತದ ಯಾವೊಬ್ಬ ಆಟಗಾರ ಕೂಡ ಇಲ್ಲ. ಒಟ್ಟು 12 ಜನರ ಈ ತಂಡಕ್ಕೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಝಮ್​ ಕ್ಯಾಪ್ಟನ್ ಆಗಿದ್ದಾರೆ. ಉಳಿದಂತೆ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​, ಇಂಗ್ಲೆಂಡ್​​ನ ಜೋಸ್​ ಬಟ್ಲರ್, ಶ್ರೀಲಂಕಾದ ಅಸಲಂಕ, ಸೌತ್ ಆಫ್ರಿಕಾದ ಮರ್​ಕ್ರಮ್​, ಇಂಗ್ಲೆಂಡ್​ನ ಮೋಯಿನ್ ಅಲಿ, ಶ್ರೀಲಂಕಾದ ವನಿಂದು ಹಸರಂಗ, ಆಸ್ಟ್ರೇಲಿಯಾದ ಆಡಂ ಝಂಪಾ, ಹೇಝಲ್​ವುಡ್​, ನ್ಯೂಜಿಲೆಂಡ್​ನ ಟ್ರೆಂಟ್​ ಬೋಲ್ಟ್​ ಮತ್ತು ದಕ್ಷಿಣ ಆಫ್ರಿಕಾದ ನಾರ್ಕಿಯಾ ಇದ್ದಾರೆ. 12ನೇ ಆಟಗಾರನಾಗಿ ಪಾಕಿಸ್ತಾನದ ಶಹೀನ್ ಅಫ್ರೀದಿ ಇದ್ದಾರೆ.

-masthmagaa.com

Contact Us for Advertisement

Leave a Reply