ತೈವಾನ್​ನಲ್ಲಿ ಭೀಕರ ರೈಲು ದುರಂತ.. ರೈಲಿಗೆ ಅಡ್ಡ ಬಂದಿತ್ತಾ ಟ್ರಕ್​?

masthmagaa.com:

ತೈವಾನ್​ನಲ್ಲಿ ಭೀಕರ ರೈಲು ದುರಂತ ನಡೆದಿದ್ದು ಕನಿಷ್ಠ 36 ಜನ ಮೃತಪಟ್ಟಿದ್ದಾರೆ. ಸುಮಾರು 70 ಜನ ಇನ್ನೂ ಅವಶೇಷಗಳ ಮಧ್ಯೆ ಸಿಲುಕಿದ್ದಾರೆ ಅಂತ ಶಂಕಿಸಲಾಗಿದೆ. ಅಂದ್ಹಾಗೆ ತೈವಾನ್​ ರಾಜಧಾನಿ ತೈಪೆಯಿಂದ ಸುಮಾರು 350 ಪ್ರಯಾಣಿಕರನ್ನ ಹೊತ್ತ ರೈಲು ಟೈಟುಂಗ್​ಗೆ ಹೊರಟಿತ್ತು. ರೈಲು ತುಂಬಾ ರಷ್ ಆಗಿದ್ದರಿಂದ ಹಲವರು ರೈಲಿಗೆ ಹತ್ತಲಿಲ್ಲ ಅಂತಾನೂ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದ್ರೆ ಹೌಲಿನ್ ಎಂಬಲ್ಲಿ ಈ ರೈಲು ಹಳಿ ತಪ್ಪಿದ ಪರಿಣಾಮ ದುರಂತ ಸಂಭವಿಸಿದೆ. ಟ್ರಕ್​ವೊಂದನ್ನ ಹಳಿ ಮೇಲೆ ನಿಲ್ಲಿಸಿದ್ದೇ ಘಟನೆಗೆ ಕಾರಣ ಅಂತ ಹೇಳಲಾಗ್ತಿದೆ. ಮೊದಲು ಟ್ರಕ್​​ಗೆ ಡಿಕ್ಕಿ ಹೊಡೆದ ರೈಲು ಬಳಿಕ ಹಳಿ ತಪ್ಪಿ ಸುರಂಗದ ಒಳಗೆ ಹೋಗಿದೆ. ರೈಲಿನ ಹಲವು ಬೋಗಿಗಳು ಸುರಂಗದ ಒಳಗೆ ಹೋಗಿ ನಜ್ಜುಗುಜ್ಜಾಗಿವೆ. ಹೀಗಾಗಿ ಸುರಂಗದ ಒಳಗೆ ಸಿಲುಕಿಕೊಂಡಿರೋರನ್ನ ರಕ್ಷಿಸಲು ಸಾಕಷ್ಟು ಸಮಸ್ಯೆ ಆಗ್ತಿದೆ. ರೈಲಿನ ಪಕ್ಕದಲ್ಲಿ ಟ್ರಕ್​ನ ಅವಶೇಷಗಳು ಇರೋದು ಫೋಟೋಗಳಲ್ಲಿ ನೋಡಬಹುದು. ತೈವಾನ್​ನಲ್ಲಿ ಕಳೆದ 4 ದಶಕಗಳಲ್ಲಿ ಸಂಭವಿಸಿದ ಅತಿ ದೊಡ್ಡ ರೈಲು ದುರಂತ ಇದಾಗಿದೆ.

-masthmagaa.com

Contact Us for Advertisement

Leave a Reply