ತೈವಾನ್‌ ಎಲೆಕ್ಷನ್‌: ಚೀನಾ ಪ್ರಭಾವ ಕುಗ್ಗಿಸಲು ಮುಂದಾದ ಅಮೆರಿಕ

masthmagaa.com:

ತೈವಾನ್‌ನಲ್ಲಿ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೀತಿದೆ. ಗೆಲುವಿನ ನಿರೀಕ್ಷೆಯಲ್ಲಿರೋ ಡೆಮೊಕ್ರೇಟಿಕ್‌ ಪ್ರೋಗ್ರೆಸ್ಸಿವ್‌ ಪಾರ್ಟಿ ಮತ್ತೆ ಅಧಿಕಾರ ಹಿಡಿಯಲು ಹವಣಿಸ್ತಿದೆ. ಆದ್ರೆ ಚೀನಾ ಮಾತ್ರ ಈ ಪಕ್ಷ ಮತ್ತೆ ಅಧಿಕಾರಕ್ಕೆ ಬಂದ್ರೆ ತೈವಾನ್‌ ಯುದ್ದದ ಅಪಾಯದಲ್ಲಿರುತ್ತೆ ಅಂತ ಬೆದರಿಕೆ ಹಾಕಿದೆ. ಈ ಮಧ್ಯೆ ಅಮೆರಿಕ ಸೆಕ್ರೆಟರಿ ಆಫ್‌ ಸ್ಟೇಟ್‌ ಆಂಟನಿ ಬ್ಲಿಂಕನ್‌, ಚೀನಾ ಕಮ್ಯುನಿಸ್ಟ್‌ ಪಾರ್ಟಿಯ ವಿದೇಶಾಂಗ ಸಚಿವ ಲಿಯು ಜಿಆನ್‌ಚಾವೊ ಹಾಗೂ ಜಪಾನ್‌ ಫಾರಿನ್‌ ಮಿನಿಸ್ಟರ್‌ ಯೊಕೊ ಕಾಮಿಕಾವರನ್ನ ಮೀಟ್‌ ಮಾಡಿದ್ದಾರೆ. ಈ ವೇಳೆ ಎಲೆಕ್ಷನ್‌ ನಡೀತಿರೋ ತೈವಾನ್‌ನಲ್ಲಿ ಶಾಂತಿ, ರಾಜಕೀಯ ಸ್ಥಿರತೆ ಮೆಂಟೇನ್‌ ಮಾಡೋ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಚುನಾವಣೆ ಮುಗಿದ ಬೆನ್ನಲ್ಲೇ ತೈವಾನ್‌ಗೆ ಅಮೆರಿಕ ಒಂದು ನಿಯೋಗವನ್ನ ಕಳಿಸುತ್ತೆ ಅಂತ ಬ್ಲಿಂಕನ್‌ ಹೇಳಿದ್ದಾರೆ. ಇನ್ನು ಅತ್ತ ಚೀನಾ ಆರ್ಮಿ, ತೈವಾನ್‌ಗೆ ಸ್ವಾತಂತ್ರ ಕೊಡಿಸೋಕೆ ಯಾವುದೇ ದೇಶ ಪ್ರಯತ್ನ ಮಾಡಿದ್ರು, ಆ ಪ್ಲಾನ್‌ನ್ನ ಬುಡಮೇಲು ಮಾಡ್ತೀವಿ, ಅಂತ ಎಫರ್ಟ್‌ಗಳನ್ನ ಕ್ರಶ್‌ ಮಾಡ್ತೀವಿ ಅಂತ ಅಮೆರಿಕಕ್ಕೆ ಇನ್‌ಡೈರೆಕ್ಟ್‌ ಆಗಿ ವಾರ್ನಿಂಗ್‌ ನೀಡಿದೆ.

-masthmagaa.com

Contact Us for Advertisement

Leave a Reply