ತೈವಾನ್​ ರೈಲು ದುರಂತ: ಕೊನೇ ಮೃತದೇಹ ಹೊರತೆಗೆಯಲು ಹರಸಾಹಸ

masthmagaa.com:

ತೈವಾನ್​ನ ಹೌಲಿಯೆನ್​ ಎಂಬಲ್ಲಿ ನಡೆದ ಭೀಕರ ರೈಲು ದುರಂತಕ್ಕೆ ಸಂಬಂಧಿಸಿದಂತೆ ಅವಶೇಷಗಳ ಅಡಿ ಸಿಲುಕಿರೋ ಕೊನೇ ಮೃತದೇಹವನ್ನ ತೆಗೆಯೋ ಕೆಲಸ ನಡೀತಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. 15 ಟನ್ ತೂಕದ ರೈಲಿನ ಬೋಗಿ ಅಡಿಗೆ ಮೃತದೇಹ ಸಿಕ್ಕಾಕೊಂಡಿದೆ. ಮತ್ತೊಂದುಕಡೆ ರಕ್ಷಣಾ ಕಾರ್ಯ ಎಲ್ಲಾ ಮುಗಿದ ಬಳಿಕ ತಮ್ಮ ಸ್ಥಾನದಿಂದ ಕೆಳಗಿಳಿಯೋದಾಗಿ ತೈವಾನ್​ನ ಟ್ರಾನ್ಸ್​ಪೋರ್ಟ್​ ಮಿನಿಸ್ಟರ್ ಲಿನ್ ಚಿಯಾ ಲುಂಗ್ ಹೇಳಿದ್ದಾರೆ. ರೈಲು ದುರಂತದಲ್ಲಿ 50 ಜನ ಮೃತಪಟ್ಟಿದ್ದು, 70 ವರ್ಷಗಳ ಬಳಿಕ ತೈವಾನ್​ನಲ್ಲಿ ಸಂಭವಿಸಿದ ಅತಿದೊಡ್ಡ ರೈಲು ಅಪಘಾತ ಇದಾಗಿದೆ.

-masthmagaa.com

Contact Us for Advertisement

Leave a Reply