ಉಭಯ ದೇಶಗಳ ಹಿತಾಸಕ್ತಿ ಕಾಪಾಡಲು ಭಾರತ-ರಷ್ಯಾ ಬದ್ದ!

masthmagaa.com:

ಭಾರತ-ರಷ್ಯಾ ಎರಡು ದೇಶಗಳ ಹಿತಾಸಕ್ತಿ ಕಾಪಾಡಲು ಎರಡೂ ದೇಶಗಳು ಬದ್ದವಾಗಿವೆ ಅಂತ ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಹೇಳಿದ್ದಾರೆ. ಸದ್ಯ ಸಿಂಗಾಪುರ ಪ್ರವಾಸದಲ್ಲಿರೊ ಜೈಶಂಕರ್‌ ಭಾರತೀಯರನ್ನ ಉದ್ದೇಶಿಸಿ ಮಾತನಾಡೋ ವೇಳೆ ರಷ್ಯಾ ಜೊತೆಗಿನ ಸಕಾರಾತ್ಮಕ ಸಂಬಂಧದ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಈ ವೇಳೆ, ರಷ್ಯಾ ಚೀನಾದತ್ತ ಹೆಚ್ಚು ವಾಲಿದೆ ಅನ್ನೊ ವಿಚಾರವನ್ನ ತಳ್ಳಿಹಾಕಿದ ಅವ್ರು, ರಷ್ಯಾ ಅಷ್ಟೇ ಅಲ್ಲ ಒಂದು ದೇಶವನ್ನ ರಾಷ್ಟ್ರದ ದೃಷ್ಟಿಕೋನದಿಂದ ನೋಡಬೇಕಾಗುತ್ತೆ. ಅಂದ್ರೆ ರಷ್ಯಾ ನಮಗೆ ಹಾನಿ ಮಾಡಿದೆ ಅನ್ನೊದ್ಕಿಂತ ನಮ್ಮ ಕಷ್ಟದ ಸಮಯದಲ್ಲಿ ನಮ್ಮ ಜೊತೆ ನಿಂತ್ಕೊಳ್ಳುತ್ತೆ ಅದನ್ನೆಲ್ಲ ನಾವು ನೋಡ್ಬೇಕಾಗುತ್ತೆ. ಹೀಗಾಗಿ ನನ್ನ ಅನುಭವದ ಪ್ರಕಾರ ರಷ್ಯಾ ನಮ್ಮ ಜೊತೆ ಪಾಸಿಟಿವ್‌ ರಿಲೇಷನ್‌ ಹೊಂದಿರೊ ದೇಶ ಅನ್ನೊದ್ರಲ್ಲಿ ಯಾವುದೇ ಡೌಟ್‌ ಇಲ್ಲ ಅಂತ ವಿದೇಶಾಂಗ ಸಚಿವರು ಸ್ಷಷ್ಟ ಪಡಿಸಿದ್ದಾರೆ. ಇನ್ನು ಮಾಸ್ಕೊದಲ್ಲಿ ನಡೆದ ಉಗ್ರರ ದಾಳಿ ಬಗ್ಗೆಯು ಜೈಶಂಕರ್‌, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್‌ ಲಾವ್ರೋವ್‌ ಅವ್ರ ಜೊತೆಗೆ ಮಾತನಾಡಿದ್ದಾರೆ. ಈ ವೇಳೆ ದಾಳಿ ಬಗ್ಗೆ ಖಂಡನೆ ವ್ಯಕ್ತಪಡಿಸಿ, ಮೃತಪಟ್ಟವರ ಬಗ್ಗೆ ಸಂತಾಪ ಸೂಚಿಸಲಾಗಿದೆ ಅನ್ನೊ ಮಾಹಿತಿಯನ್ನ ಖುದ್ದು ಜೈಶಮಕರ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಹೇಳ್ಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply