ತಾಲಿಬಾನಿಗಳಿಂದ ಮಹಿಳೆಯರಿಗೆ ಬಾತ್‌ ರೂಮ್‌ ಕಂಟಕ!

masthmagaa.com:

ಅಮೆರಿಕ ಬೆಂಬಲಿತ ಸರ್ಕಾರ ಇದ್ದಾಗ ಸ್ವಲ್ಪ ಮಾರ್ಡರ್ನ್​​ ಶೈಲಿಯತ್ತ ಹೊರಳಿದ್ದ ಅಫ್ಘಾನಿಸ್ತಾನ ಈಗ ಮತ್ತೆ ತಾಲಿಬಾನಿಗಳ ಕಟ್ಟುಪಾಡುಗಳಿಂದ ಬಂಧಿಯಾಗ್ತಿದೆ. ಇಲ್ಲಿ ಮಹಿಳೆಯರಿಗೆ ದಿನಕ್ಕೊಂದು ಕಟ್ಟುಪಾಡುಗಳನ್ನು ಹೇರಲಾಗ್ತಿದೆ. ಇದೀಗ ಉಜ್ಬೇಕಿಸ್ತಾನದ ಗಡಿಗೆ ಅಂಟಿಕೊಂಡಿರೋ ಬಾಲ್ಕ್ ಪ್ರಾಂತ್ಯದಲ್ಲಿ ಮಹಿಳೆಯರ ಜನರಲ್ ಬಾತ್​​​ರೂಂಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ. ಸ್ನಾನ ಮಾಡುವಾಗ ಹಿಜಬ್ ಧರಿಸಲು ಸಾಧ್ಯವಾಗೋದಿಲ್ಲ. ಹೀಗಾಗಿ ಮಹಿಳೆಯರು ತಮ್ಮ ಖಾಸಗಿ ಬಾತ್​ರೂಂಗಳಲ್ಲಿ ಮಾತ್ರವೇ ಸ್ನಾನ ಮಾಡ್ಬೇಕು. ಪುರುಷರು ಮಾತ್ರ ಜನರಲ್ ಬಾತ್​​ರೂಂಗಳನ್ನು ಕೂಡ ಬಳಸಬಹುದು ಅಂತ ಆದೇಶಿಸಲಾಗಿದೆ. ಧಾರ್ಮಿಕ ನಾಯಕರು ಮತ್ತು ಪ್ರಾಂತ್ಯದ ಆಡಳಿತಾಧಿಕಾರಿಗಳು ಸೇರಿಕೊಂಡು ಈ ನಿರ್ಧಾರ ತಗೊಂಡಿದ್ದಾರೆ. ಸಣ್ಣ ಸಣ್ಣ ಹುಡುಗರು ಕೂಡ ಜನರಲ್ ಬಾತ್​ರೂಂಗೆ ಹೋಗಂಗಿಲ್ಲ.. ಬಾಡಿ ಮಸಾಜ್ ಕೂಡ ಮಾಡುವಂತಿಲ್ಲ ಅಂತ ಕೂಡ ಆದೇಶಿಸಲಾಗಿದೆ. ಇತ್ತೀಚೆಗೆ ಹೇರತ್ ಪ್ರಾಂತ್ಯದಲ್ಲೂ ಜನರಲ್ ಬಾತ್​​ರೂಮನ್ನು ಮಹಿಳೆಯರಿಗೆ ಮುಚ್ಚಲಾಗಿತ್ತು.

-masthmagaa.com

Contact Us for Advertisement

Leave a Reply