ಏರ್​ಪೋರ್ಟ್ ನಡೆಸಲು ಬಾರದೇ ಟರ್ಕಿ ಕರೆದ ತಾಲಿಬಾನಿಗಳು!

masthmagaa.com:

ಅಫ್ಘನಿಸ್ತಾನವನ್ನ ತಾಲಿಬಾನಿಗಳು ಟೇಕೋವರ್ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಟರ್ಕಿ ತಾಲಿಬಾನ್​ ಜೊತೆ ಮಾತುಕತೆ ನಡೆಸಿದೆ ಅಂತ ಟರ್ಕಿ ಅಧ್ಯಕ್ಷ ಎರ್ಡೋವನ್​ ಹೇಳಿದ್ದಾರೆ. ಸಾಧ್ಯವಾದ್ರೆ ಮತ್ತೊಮ್ಮೆ ಇಂಥಾ ಮಾತುಕತೆ ನಡೆಸ್ತೀವಿ ಅಂತಾನೂ ಹೇಳಿದ್ದಾರೆ. ಕಾಬೂಲ್​​ ಏರ್​ಪೋರ್ಟ್​ನಲ್ಲಿ ತಾತ್ಕಾಲಿಕವಾಗಿ ರಚನೆಯಾಗಿರೋ ಟರ್ಕಿ ರಾಯಭಾರ ಕಚೇರಿಯಲ್ಲಿ ಈ ಮೀಟಿಂಗ್ ನಡೆದಿದೆ. ಅಂದ್ಹಾಗೆ ನ್ಯಾಟೋ ಮಿಷನ್ ಅಡಿಯಲ್ಲಿ ಕಳೆದ 6 ವರ್ಷಗಳಿಂದ ಕಾಬೂಲ್​ ಏರ್ಪೋರ್ಟ್​ನ ಭದ್ರತೆಯ ಜವಾಬ್ದಾರಿ ಟರ್ಕಿಗೆ ಸೇರಿತ್ತು. ಆಗಸ್ಟ್ 31ನೇ ತಾರೀಖು ಅಮೆರಿಕ ಸೇರಿದಂತೆ ಎಲ್ಲಾ ದೇಶಗಳು ಗಂಟುಮೂಟೆ ಕಟ್ಕೊಂಡು ವಾಪಸ್ ಹೋಗ್ತಿವೆ. ಆಗ ಕಾಬೂಲ್​ ಏರ್ಪೋರ್ಟ್​ನ ಭದ್ರತೆ ಮತ್ತು ಅದನ್ನ ಮುನ್ನಡೆಸೋ ಜವಾಬ್ದಾರಿ ಟರ್ಕಿಗೆ ಕೊಡೋ ಪ್ಲಾನ್ ಹೊಂದಿತ್ತು ತಾಲಿಬಾನ್. ಆದ್ರೀಗ ಏರ್ಪೋರ್ಟ್​ನ ಭದ್ರತೆಯನ್ನ ನಾವೇ ನೋಡ್ಕೋತೀವಿ, ನೀವು ಲಾಜಿಸ್ಟಿಕ್ಸ್ ಅನ್ನ ನೋಡ್ಕೊಳ್ಳಿ ಅಂತ ಟರ್ಕಿಗೆ ತಾಲಿಬಾನಿಗಳು ಆಫರ್ ಕೊಟ್ಟಿದ್ದಾರೆ ಅಂತ ಎರ್ಡೋವನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply