ಕಾಬೂಲ್​ನಲ್ಲಿ ಮಹಿಳೆಯರ ಪ್ರತಿಭಟನೆ! ಪತ್ರಕರ್ತರ ಮೇಲೆ ತಾಲಿಬಾನ್ ಹಲ್ಲೆ!

masthmagaa.com:

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​​ನಲ್ಲಿ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸಿದ್ದಾರೆ. ಸುಮಾರು 20 ಮಂದಿ ಮಹಿಳೆಯರು ಶಿಕ್ಷಣ ಸಚಿವಾಲಯದಿಂದ ಹಣಕಾಸು ಸಚಿವಾಲಯದವರೆಗೆ ಮಾರ್ಚ್ ಮಾಡಿದ್ದಾರೆ. ಜೊತೆಗೆ ಶಿಕ್ಷಣವನ್ನು ಕೂಡ ರಾಜಕೀಯಗೊಳಿಸಬೇಡಿ ಅಂತ ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ನಮಗೆ ಶಿಕ್ಷಣ ಮತ್ತು ಕೆಲಸದ ಹಕ್ಕು ಇಲ್ಲ. ನಿರುದ್ಯೋಗ, ಬಡತನ, ಹಸಿವು ಅಂತೆಲ್ಲಾ ಫಲಕಗಳನ್ನು ಹಿಡಿದುಕೊಂಡಿದ್ರು. ಮಹಿಳೆಯರಿಗೆ ಒಂದೂವರೆ ಗಂಟೆ ಪ್ರತಿಭಟನೆ ನಡೆಸಲು ತಾಲಿಬಾನಿಗಳು ಅವಕಾಶ ನೀಡಿದ್ರೂ, ಪತ್ರಕರ್ತರಿಗೆ ಫೊಟೋ ತೆಗೆಯೋಕೆ, ವರದಿ ಮಾಡೋಕೆ ಅಡ್ಡಿಪಡಿಸಿದ್ದಾರೆ. ಹಲವು ಪತ್ರಕರ್ತರಿಗೆ ಥಳಿಸಿದ್ದಾರೆ ಅಂತ ಕೂಡ ವರದಿಯಾಗಿದೆ.

-masthmagaa.com

Contact Us for Advertisement

Leave a Reply