85% ಅಫ್ಘಾನಿಸ್ತಾನ ಈಗ ತಾಲಿಬಾನಿಗಳ ಕೈಯಲ್ಲಿ?

masthmagaa.com:

ಆಗಸ್ಟ್ ಅಂತ್ಯದ ವೇಳೆಗೆ ಅಫ್ಘಾನಿಸ್ತಾನದಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳೋದಾಗಿ ಅಮೆರಿಕ ಘೋಷಿಸಿದ ಬಳಿಕ ತಾಲಿಬಾನಿಗಳ ಅಟ್ಟಹಾಸ ಜಾಸ್ತಿಯಾಗಿದೆ. ಒಂದೊಂದೇ ಪ್ರದೇಶವನ್ನು ವಶಕ್ಕೆ ಪಡೆದುಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಈಗಾಗಲೇ ನಾವು 85 ಪರ್ಸೆಂಟ್​​ನಷ್ಟು ಪ್ರದೇಶವನ್ನು ಕಂಟ್ರೋಲ್ ಮಾಡ್ತಿದ್ದೀವಿ ಅಂತ ತಾಲಿಬಾನಿಗಳು ಘೋಷಿಸಿಕೊಂಡಿದ್ದಾರೆ. ಅದೇ ರೀತಿ ರಷ್ಯಾ ಕೂಡ ಅಫ್ಘಾನಿಸ್ತಾನ ಮತ್ತು ತಜಕಿಸ್ತಾನ ಗಡಿ ಪೈಕಿ 3ನೇ 2ರಷ್ಟನ್ನು ತಾಲಿಬಾನಿಗಳು ನಿಯಂತ್ರಿಸ್ತಿದ್ದಾರೆ ಅಂತ ತಿಳಿಸಿದೆ. ದೇಶದಲ್ಲಿ ಹೀಗೆ ತಾಲಿಬಾನಿಗಳು ಮತ್ತು ಸೇನೆಯ ನಡುವೆ ಸಮರ ನಡೀತಾ ಇದ್ರೆ, ಹೊರಗಿನ ಹಲವು ದೇಶಗಳ ಕಣ್ಣು ಈ ಬಡದೇಶದ ಮೇಲೆ ಬಿದ್ದಿದೆ. ಇಷ್ಟು ವರ್ಷಗಳ ಕಾಲ ಅಫ್ಘಾನಿಸ್ತಾನ ಸರ್ಕಾರಕ್ಕೆ ಬೆಂಬಲಿಸ್ತಾ ಬಂದಿತ್ತು ಅಮೆರಿಕ. ಆದ್ರೆ ಈಗ ಹೊರಹೋಗ್ತಿರೋದ್ರಿಂದ ತಾಲಿಬಾನಿಗಳು ಪವರ್​ ಫುಲ್ ಆಗೋದ್ರಲ್ಲಿ ಯಾವುದೇ ಸಂದೇಹವಿಲ್ಲ. ರಷ್ಯಾಗೂ ಇದೇ ಬೇಕಾಗಿರೋದು. ಯಾಕಂದ್ರೆ ತಾಲಿಬಾನಿಗಳಿಗೆ ರಷ್ಯಾ ತುಂಬಾ ಹತ್ತಿರವಾಗಿದೆ. ತನ್ನ ಜೊತೆಗಾರ ಅಂತಲೇ ಭಾವಿಸುತ್ತೆ. ಹೀಗಾಗಿ ಅವರ ಮೂಲಕ ಆಫ್ಘಾನಿಸ್ತಾನವನ್ನು ಕಂಟ್ರೋಲ್ ಮಾಡೋಕೆ ರಷ್ಯಾ ಮಸಲತ್ತು ಮಾಡ್ತಾ ಇದೆ. ಮತ್ತೊಂದ್ಕಡೆ ಚೀನಾ ಅಫ್ಘಾನಿಸ್ಥಾನದಲ್ಲಿ ಬೆಲ್ಟ್​ ರೋಡ್ ಇನಿಶಿಯೇಟಿವ್ ಮೂಲಕ ತನ್ನ ವ್ಯಾಪಾರ ಸಾಮ್ರಾಜ್ಯ ವಿಸ್ತರಣೆಯ ಕನಸು ಕಾಣ್ತಿದೆ. ಅದೇ ರೀತಿ ಭಾರತ ಮತ್ತು ಅಫ್ಘಾನಿಸ್ತಾನ ಹತ್ತಿರವಾಗದಂತೆ ನೋಡಿಕೊಳ್ಳೋದು ಕೂಡ ಚೀನಾ ಮತ್ತು ಪಾಕಿಸ್ತಾನದ ಉದ್ದೇಶವಾಗಿದೆ. ಮತ್ತೊಂದ್ಕಡೆ ಪಾಕಿಸ್ತಾನಕ್ಕೆ ಇದ್ರಿಂದ ಹೊಸ ತಲೆ ನೋವು ಶುರುವಾಗಿದೆ. ಅದೇನಂದ್ರೆ ವಲಸಿಗರದ್ದು.. ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ಜಾಸ್ತಿಯಾದಂತೆ ಅಲ್ಲಿಂದ ಜನ ಪಾಕಿಸ್ತಾನಕ್ಕೆ ಬರೋ ಸಾಧ್ಯತೆ ಇದೆ. ಹೀಗಾಗಿ ವಿದೇಶದಿಂದ ಬರೋ ಎಲ್ಲರನ್ನು ರಿಜಿಸ್ಟ್ರೇಷನ್ ಮಾಡಿಸಲು ಆದೇಶ ಹೊರಡಿಸಿದೆ. ದೇಶದಲ್ಲಿ 70 ವರ್ಷಗಳಲ್ಲಿ 40ರಿಂದ 50 ಸಾವಿರದಷ್ಟು ಜನ ದೇಶವನ್ನು ಪ್ರವೇಶಿಸಿದ್ದು, ಅವರೆಲ್ಲಾ ಈಗ ಎಲ್ಲಿದ್ದಾರೆ ಅಂತಲೇ ಗೊತ್ತಿಲ್ಲ. ಇಂಥಹ ಅಕ್ರಮ ಪ್ರವೇಶ ತಡೆಯಲು ರಿಜಿಸ್ಟ್ರೇಷನ್ ವ್ಯವಸ್ಥೆ ಜಾರಿಗೆ ತರ್ತಿರೋದಾಗಿ ದೇಶದ ಗೃಹಸಚಿವ ಶೇಖ್ ರಶೀದ್ ಅಹ್ಮದ್ ಮಾಹಿತಿ ನೀಡಿದ್ದಾರೆ.

-masthmagaa

Contact Us for Advertisement

Leave a Reply