ಪಂಜ್​ಶಿರ್​-ತಾಲಿಬಾನ್ ಮಾತುಕತೆ: ಅಟ್ಯಾಕ್​ ಮಾಡದಂತೆ ಒಪ್ಪಂದ!

masthmagaa.com:

ತಾಲಿಬಾನ್ ವಿರುದ್ಧ ತಿರುಗಿಬಿದ್ದಿದ್ದ ಪಂಜ್​ಶಿರ್​ ನಾಯಕ ಅಹ್ಮದ್ ಮಸ್ಸೌದ್​ ಕಡೆಯವರು ಮತ್ತು ತಾಲಿಬಾನ್​ ಪ್ರತಿನಿಧಿಗಳ ಮಧ್ಯೆ ಬುಧವಾರ ಮೊದಲ ಹಂತದ ಮಾತುಕತೆ ನಡೆದಿದೆ ಅಂತ ವರದಿಯಾಗಿದೆ. ಕಾಬೂಲ್​ ಮತ್ತು ಪಂಜ್​ಶಿರ್ ಪ್ರಾಂತ್ಯಗಳ ಮಧ್ಯದಲ್ಲಿರೋ ಪರ್ವಾನ್ ಪ್ರಾಂತ್ಯದಲ್ಲಿ ಈ ಮಾತುಕತೆ ನಡೆದಿದೆ. ಈ ವೇಳೆ, ತಾಲಿಬಾನಿಗಳು ಪಂಜ್​ಶಿರ್​ ಬಗ್ಗೆ ಮಾತಾಡೋಕೆ ಮುಂದಾದ್ರು. ಆದ್ರೆ ಪಂಜ್​ಶಿರ್​ ನಾಯಕರು ತಾಲಿಬಾನ್ ಸರ್ಕಾರ ಹೇಗಿರಲಿದೆ. ಅಧಿಕಾರದ ವಿಕೇಂದ್ರಿಕರಣದ ಬಗ್ಗೆ ಎಲ್ಲಾ ಮಾತುಕತೆ ನಡೆಸೋಕೆ ಮುಂದಾಗಿದ್ದಾರೆ. ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಮಾತುಕತೆ ಯಶಸ್ವಿಯಾಗಿಲ್ಲ. ಹೀಗಾಗಿ ಎರಡನೇ ಹಂತದ ಮಾತುಕತೆ ನಡೆಯೋವರೆಗೆ ಪರಸ್ಪರ ಒಬ್ಬರ ಮೇಲೆ ಮತ್ತೊಬ್ಬರು ದಾಳಿ ಮಾಡ್ಬಾರ್ದು ಅನ್ನೋ ಒಪ್ಪಂದಕ್ಕೆ ಪಂಜ್​ಶಿರ್​ ಮತ್ತು ತಾಲಿಬಾನಿಗಳು ಬಂದಿದ್ದಾರೆ.

-masthmagaa.com

Contact Us for Advertisement

Leave a Reply