ಮುಂದೆ ಲ್ಯಾಪ್​ಟಾಪ್, ಪಕ್ಕದಲ್ಲಿ ಬಂದೂಕು: ಈತ ಅಫ್ಘನ್ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥ

masthmagaa.com:

ಅಫ್ಘಾನಿಸ್ತಾನದ ಸೆಂಟ್ರಲ್ ಬ್ಯಾಂಕ್​​ ‘ದ ಅಫ್ಘಾನಿಸ್ತಾನ್ ಬ್ಯಾಂಕ್​​​’ಗೆ ತಾಲಿಬಾನಿಗಳು ಹಾಜಿ ಮೊಹ್ಮದ್ ಇದ್ರಿಸ್​​ ಅವರನ್ನು ಮುಖ್ಯಸ್ಥನನ್ನಾಗಿ ನೇಮಕ ಮಾಡಿದೆ. ಜೊತೆಗೆ ದೇಶದಲ್ಲಿ ನಮಗೆ ಉತ್ತಮ ಹಣಕಾಸಿನ ವ್ಯವಸ್ಥೆ ಬೇಕಿದೆ ಅಂತ ಬ್ಯಾಂಕುಗಳಿಗೆ ಕರೆ ನೀಡಿದೆ. ಇದ್ರ ಬೆನ್ನಲ್ಲೇ ಹಾಜಿ ಮೊಹ್ಮದ್ ಇದ್ರಿಸ್​​​​ರ ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದ್ರಲ್ಲಿ ಲ್ಯಾಪ್​ಟಾಪ್ ಹಿಡಿದು ದ ಅಫ್ಘಾನಿಸ್ತಾನ್ ಬ್ಯಾಂಕ್ ಕಚೇರಿಯ ಮುಖ್ಯಸ್ಥರ ಜಾಗದಲ್ಲಿ ಕುಳಿತಿದ್ದಾರೆ. ಆದ್ರೆ ಪಕ್ಕದಲ್ಲಿ ಬಂದೂಕು ಕೂಡ ಕಾಣಬಹುದಾಗಿದೆ. ಇತ್ತೀಚೆಗಷ್ಟೇ ಇವರ ಆಯ್ಕೆಯ ಬಗ್ಗೆ ಅನೌನ್ಸ್ ಮಾಡಿದ್ದ ತಾಲಿಬಾನ್ ವಕ್ತಾರ ಝೈಬುಲ್ಲಾ ಮುಜಾಹಿದ್​​, ಈ ಹಾಜಿ ಮೊಹ್ಮದ್ ಇದ್ರಿಸ್​​​​​ ಸರ್ಕಾರಿ ಹಣಕಾಸು ಸಂಸ್ಥೆಗಳನ್ನು ಸಂಘಟಿಸ್ತಾರೆ. ಬ್ಯಾಕಿಂಗ್ ಕ್ಷೇತ್ರ ಮತ್ತು ಜನರ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಅಂತ ಹೇಳಿದ್ರು. ಆದ್ರೆ ಈಗ ವೈರಲ್ ಆಗ್ತಿರೋ ಫೋಟೋ ನೋಡಿದ್ರೆ ಅದು ಯಾವ ರೀತಿ ಸಮಸ್ಯೆ ಬಗೆಹರಿಸಬಹುದು ಅನ್ನೋದರ ಬಗ್ಗೆ ಚರ್ಚೆ ನಡೀತಾ ಇದೆ. ಇವರ ಬಗ್ಗೆ ಪ್ರತಿಕ್ರಿಯಿಸಿದ್ದ ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್​​, ತಾಲಿಬಾನ್​​ನ ಕಪ್ಪು ಹಣವನ್ನು ಬಿಳಿ ಮಾಡೋ ಕೆಲಸ ಮಾಡುತ್ತಿದ್ದ ಹಾಜಿ ಮೊಹ್ಮದ್ ಇದ್ರಿಸ್​​​ರನ್ನು ಸೆಂಟ್ರಲ್ ಬ್ಯಾಂಕ್​​ಗೆ ಆಯ್ಕೆ ಮಾಡಲಾಗ್ತಿದೆ. ಇವರು ತಾಲಿಬಾನ್ ಮತ್ತು ಉಗ್ರ ಸಂಘಟನೆಗಳ ನಡುವಿನ ಹಣಕಾಸಿ ನ ವ್ಯವಹಾರವನ್ನೂ ನೋಡ್ಕೊಳ್ತಿದ್ರು ಅಂತ ಎಚ್ಚರಿಸಿದ್ರು. ಅಂದಹಾಗೆ ಇದ್ರಿಸ್​​ ಶಿಕ್ಷಣದ ಬಗ್ಗೆ ಕೂಡ ಮಾಹಿತಿ ಇಲ್ಲ.. ಆದ್ರೆ ತಾಲಿಬಾನಿಗಳು ಮಾತ್ರ, ಇದ್ರಿಸ್​ ಧಾರ್ಮಿಕ ಪುಸ್ತಕಗಳನ್ನೂ ಓದಿಲ್ಲ.. ಆದ್ರೆ ಹಣಕಾಸಿನ ವಿಚಾರದಲ್ಲಿ ದೊಡ್ಡಮಟ್ಟದ ಜ್ಞಾನ ಹೊಂದಿದ್ದಾರೆ ಅಂತ ಹೇಳಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply