ಭಾರತಕ್ಕೆ ‘ಚುಚ್ಚಿದ’ ತಾಲಿಬಾನ್ 1761, ಪಾಣಿಪತ್ & ತಾಲಿಬಾನ್ ಸೇನೆ!

masthmagaa.com:

ಅಫ್ಘನಿಸ್ತಾನದಲ್ಲಿ ಅಧಿಕಾರಕ್ಕೆ ಬಂದಿರೋ ತಾಲಿಬಾನಿಗಳು ತಮ್ಮ ಸೇನೆಯಲ್ಲಿ ‘ಪಾಣಿಪತ್​’ ಹೆಸರಿನ ಮಿಲಿಟರಿ ಯೂನಿಟ್​ ಅನ್ನ ಕ್ರಿಯೇಟ್​ ಮಾಡಿಕೊಂಡಿದ್ದಾರೆ. ಪಾಣಿಪತ್​ ಹರಿಯಾಣದಲ್ಲಿ ಬರೋ ಒಂದು ನಗರ. ಇದಕ್ಕೂ ತಾಲಿಬಾನಿಗಳಿಗೂ ಏನು ಸಂಬಂಧ ಅನ್ನೋ ಪ್ರಶ್ನೆ ಬರುತ್ತೆ.. ಇಂಡಿಯನ್​ ಹಿಸ್ಟರಿಯಲ್ಲಿ ಪಾಣಿಪತ್​ ಹೆಸರನ್ನ ನೀವು ಕೇಳಿರಬೋದು. ಒಂದನೇ ಪಾಣಿಪತ್ ಕದನ, ಎರಡನೇ ಪಾಣಿಪತ್ ಕದನ, ಮೂರನೇ ಪಾಣಿಪತ್ ಕದನ ಅಂತ. 1761ರಲ್ಲಿ ಮರಾಠ ಸಾಮ್ರಾಜ್ಯ ಮತ್ತು ಅಫ್ಘನ್​ ರೂಲರ್​ ಕಮ್​ ದುರ್ರಾನಿ ಸಾಮ್ರಾಜ್ಯದ ಸಂಸ್ಥಾಪಕ ಅಹ್ಮದ್​ ಶಾ ದುರ್ರಾನಿ ಸೇನೆಗಳ ಮಧ್ಯೆ ಮೂರನೇ ಪಾಣಿಪತ್​ ಕದನ ನಡೆದಿತ್ತು.

ಈ ಯುದ್ಧದಲ್ಲಿ ಮರಾಠರಿಗೆ ಭಾರತದ ಇತರ ಸಾಮ್ರಾಜ್ಯಗಳ ನೆರವು ಸಿಕ್ಕಿರಲಿಲ್ಲ. ಹೀಗಾಗಿ ದುರ್ರಾನಿ ಸೇನೆ ಎದುರು ಮರಾಠ ಸೇನೆ ಸೋತೋಗಿತ್ತು, ಅಫ್ಘನ್ನರು ಗೆದ್ದಿದ್ರು. ಗೆದ್ರೂ ಕೂಡ ನಂತರ ಬೆಳವಣಿಗೆಯಲ್ಲಿ ಅಫ್ಘನ್ನರು ಅಫ್ಘನಿಸ್ತಾನಕ್ಕೆ ವಾಪಸ್​ ಹೋಗಬೇಕಾಯ್ತು. ಇದೇ ಮೂರನೇ ಪಾಣಿಪತ್ ಕದನ ಭಾರತದಲ್ಲಿ ಈಸ್ಟ್​ ಇಂಡಿಯಾ ಕಂಪನಿಯ ಆಳ್ವಿಕೆ ಶುರುವಾಗಲು ನಾಂದಿಯಾಗಿತ್ತು. ಸೋ ಮೂರನೇ ಪಾಣಿಪತ್ ಕದನದಲ್ಲಿ ಮರಾಠರನ್ನ ಆಫ್ಘನ್​ ದೊರೆ ದುರ್ರಾನಿ ಸೋಲಿಸಿದ ಘಟನೆಯಿಂದ ಸ್ಪೂರ್ತಿ ಪಡೆದ ತಾಲಿಬಾನಿಗಳು ಈಗ ತಮ್ಮ ಸೇನೆಯಲ್ಲಿ ಪಾಣಿಪತ್ ಅನ್ನೋ ಆಪರೇಷನಲ್​ ಯೂನಿಟ್​ ಶುರು ಮಾಡಿದ್ದಾರೆ.

ಈ ಘಟಕವನ್ನ ಅಫ್ಘನಿಸ್ತಾನದ ಪೂರ್ವದಲ್ಲಿರೋ ನಂಗರ್​ಹಾರ್​ ಪ್ರಾಂತ್ಯದಲ್ಲಿ ನಿಯೋಜನೆ ಮಾಡಲಾಗುತ್ತೆ. ಈ ನಂಗರ್​ಹಾರ್ ಪ್ರಾಂತ್ಯ ಪಾಕಿಸ್ತಾನ ಜೊತೆ ಗಡಿ ಹಂಚಿಕೊಳ್ಳುತ್ತೆ ಅನ್ನೋದು ಇಂಟರೆಸ್ಟಿಂಗ್​. ಇನ್ನು ಈ ಪಾಣಿಪತ್​ ಆಪರೇಷನಲ್​ ಯೂನಿಟ್​​ನ ಸದಸ್ಯರು ಸೇನಾ ಸಮವಸ್ತ್ರ ಧರಿಸಿ, ಅಮೆರಿಕದ ರೈಫಲ್​ಗಳನ್ನ ಹಿಡಿದುಕೊಂಡು, ನಂಗರ್​ಹಾರ್​ ರಾಜಧಾನಿ ಜಲಾಲಾಬಾದ್​​ನಲ್ಲಿ ಪರೇಡ್​ ನಡೆಸ್ತಿರೋ ಫೋಟೋಗಳನ್ನ ತಾಲಿಬಾನ್​ ಶೇರ್​ ಮಾಡ್ಕೊಂಡಿದೆ. ಆದ್ರೆ ತಾಲಿಬಾನ್​ನ ಈ ಪಾಣಿಪತ್​ ಮಿಲಿಟರಿ ಯೂನಿಟ್​ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಜೋರಾಗಿ ನಡೀತಿದೆ. ಕೆಲವರು ಇದನ್ನ ಹೊಗಳಿದ್ರೆ, ಇನ್ನೂ ಕೆಲವರು ಖಂಡಿಸಿದ್ದಾರೆ.

ಭಾರತವನ್ನ ದ್ವೇಷಿಸಲು ತಾಲಿಬಾನ್​ ಈಥರ ಪಾಣಿಪತ್ ಅಂತ ಹೆಸರಿಟ್ಟಿದೆ ಎಂದು ಕೆಲವರು ಹೇಳಿದ್ರೆ. ಇನ್ನೂ ಕೆಲವರು ಹಿಸ್ಟರಿ ರಿಪೀಟ್ ಆಗುತ್ತೆ, ಹಿಂದೂಗಳು ಇದನ್ನ ಸ್ಪಷ್ಟ ಸಂಕೇತವಾಗಿ ತೆಗೆದುಕೊಳ್ಳಬೇಕು. ನಾವು ನಮ್ಮ ಪೂರ್ವಜರನ್ನ ಮರೆತಿಲ್ಲ. ಮುಸ್ಕಾನ್ ಸಹೋದರಿ, ನಿಮ್ಮ ಕೂಗು ನಮಗೆ ಕೇಳಿಸುತ್ತೆ ಅಂತೆಲ್ಲಾ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಹಿಜಬ್​ ವಿವಾದದಲ್ಲಿ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್​ ಖಾನ್​ ಫೇಮಸ್​ ಆಗಿದ್ದಳು. ಕೆಲ ಸೋಷಿಯಲ್​ ಮೀಡಿಯಾ ಯೂಸರ್ಸ್​, ತಾಲಿಬಾನಿಗಳ ಪಾಣಿಪತ್ ಯೂನಿಟ್​​ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂದಿದ್ದಾರೆ.

ಅಫ್ಘನಿಸ್ತಾನದಲ್ಲಿ ಅಮೆರಿಕ ಮತ್ತು ನ್ಯಾಟೋ ಪಡೆಗಳು ಬಿಟ್ಟುಹೋದ ಶಸ್ತ್ರಾಸ್ತ್ರಗಳು ಪಾಕಿಸ್ತಾನದಲ್ಲಿ ಕಡಿಮೆ ಬೆಲೆಗೆ ಬಿಕರಿಯಾಗ್ತಿದೆ ಅಂತ ನಿನ್ನೆಯಷ್ಟೇ ಸುತ್ತು ಜಗತ್ತಿನಲ್ಲಿ ಹೇಳಿದ್ವಿ. ಈಗ ತಾಲಿಬಾನಿಗಳು ಪಾಣಿಪತ್ ಹೆಸರಲ್ಲಿ ಮಿಲಿಟರಿ ಯೂನಿಟ್ಟನ್ನೇ ಕ್ರಿಯೆಟ್​ ಮಾಡಿದ್ದಾರೆ. ಈ ಎರಡು ದೇಶಗಳು ಸೇರ್ಕೊಂಡ್​ ಭಾರತಕ್ಕೇನಾದ್ರೂ ಸಮಸ್ಯೆ ತಂದಿಡ್ತಾವಾ ಅನ್ನೋ ಆತಂಕ ಮೂಡಿದೆ. ಈ ಬಗ್ಗೆ ಭಾರತ ಎಚ್ಚರದಿಂದ ಇರಬೇಕು.

-masthmagaa.com

Contact Us for Advertisement

Leave a Reply