ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಮಾರಣಹೋಮ!

masthmagaa.com:

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಮತ್ತು ಭದ್ರತಾ ಸಿಬ್ಬಂದಿ ನಡುವಿನ ಸಮರ ತಾರಕಕ್ಕೇರಿದೆ. ಈಗಾಗಲೇ 90 ಪರ್ಸೆಂಟ್ ಅಫ್ಘಾನಿಸ್ತಾನವನ್ನು ಕಂಟ್ರೋಲ್​​ಗೆ ತಗೊಂಡಿದ್ದೀವಿ ಅಂತ ಹೇಳ್ಕೊಂಡಿರೋ ತಾಲಿಬಾನಿಗಳು, ಅಟ್ಟಹಾಸ ಮುಂದುವರಿಸಿದ್ದಾರೆ. ಕಂದಹಾರ್​ನ ಗಜನಿಯಲ್ಲಿ ದುಷ್ಟರು ನಡೆಸಿದ ದಾಳಿಗೆ 43 ಮಂದಿ ಬಲಿಯಾಗಿದ್ದಾರೆ. ಇದ್ರಲ್ಲಿ ಸಾಮಾನ್ಯ ಜನ ಮತ್ತು ಭದ್ರತಾ ಸಿಬ್ಬಂದಿಯೂ ಸೇರಿದ್ದಾರೆ. ತಾಲಿಬಾನಿಗಳು ಬರೀ ಪ್ರದೇಶಗಳನ್ನು ವಶಕ್ಕೆ ಪಡ್ಕೊಳ್ತಿಲ್ಲ. ಬದಲಾಗಿ ಮನೆಗಳಿಗೆ ನುಗ್ಗಿ ಲೂಟಿ ಮಾಡ್ತಿದ್ದಾರೆ. ಮನೆಗಳಿಗೆ ಬೆಂಕಿ ಹಚ್ಚಿ ರಾಕ್ಷಸರ ರೀತಿ ವರ್ತಿಸ್ತಿದ್ದಾರೆ. ಇವರ ಅಟ್ಟಹಾಸದಿಂದ ಕಂಗೆಟ್ಟ ಸುಮಾರು 22 ಸಾವಿರ ಮಂದಿ ಕಂದಹಾರ್​ನಿಂದ ಕಾಬೂಲ್​ ಕಡೆಗೆ ವಲಸೆ ಹೋಗಿದ್ದಾರೆ. ಯಾಕಂದ್ರೆ ಕಾಬೂಲ್ ಇನ್ನು ಕೂಡ ಅಫ್ಘಾನಿಸ್ತಾನ ಸೇನೆಯ ಕಂಟ್ರೋಲ್​​ನಲ್ಲಿದೆ. ಇನ್ನು ತಾಲಿಬಾನಿಗಳಿಗೆ ಅಫ್ಘಾನಿಸ್ತಾನ ಯೋಧರು ಕೂಡ ಸರಿಯಾಗೇ ಟಕ್ಕರ್ ಕೊಡ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ 262 ಮಂದಿ ತಾಲಿಬಾನಿಗಳನ್ನು ಹತ್ಯೆ ಮಾಡಿರೋದಾಗಿ ಅಫ್ಘಾನಿಸ್ಥಾನ ಸೇನೆ ಶನಿವಾರ ಘೋಷಿಸಿದೆ. ಇದ್ರಲ್ಲಿ 176 ಮಂದಿ ಪ್ರಾಣ ಕಳ್ಕೊಂಡಿದ್ದು, 21 ಐಇಡಿಯನ್ನು ವಶಕ್ಕೆ ಪಡೆದು ನಿಷ್ಕ್ರಿಯಗೊಳಿಸಿದೀವಿ ಅಂತ ಕೂಡ ಮಾಹಿತಿ ನೀಡಿದೆ. ಅಶ್ರಫ್ ಘನಿ ಸರ್ಕಾರ ಅಧಿಕಾರದಿಂದ ಕೆಳಗಿಳಿಯುವವರೆಗೂ ದಾಳಿ ಮುಂದುವರಿಸ್ತೀವಿ. ಯಾವತ್ತು ಅಫ್ಘಾನಿಸ್ತಾನದಲ್ಲಿ ಎಲ್ಲರಿಗೂ ಒಪ್ಪಿಗೆಯಾಗುವಂತಹ ಸರ್ಕಾರ ಬರುತ್ತೋ ಅವತ್ತು ಶಸ್ತ್ರಾಸ್ತ್ರ ಕೆಳಗಿಳಿಸುತ್ತೇವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply