ವಿವಿಧ ದೇಶಗಳ ರಾಯಭಾರಿ, ಅಧಿಕಾರಿಗಳನ್ನು ಭೇಟಿಯಾದ ತಾಲಿಬಾನ್!

masthmagaa.com:

ವಿವಿಧ ದೇಶಗಳ ಅಧಿಕಾರಿಗಳು ಮತ್ತು ರಾಯಭಾರಿಗಳನ್ನು ಭೇಟಿಯಾಗಿರೋದಾಗಿ ತಾಲಿಬಾನ್ ಹೇಳಿದೆ. ಈ ಬಗ್ಗೆ ಟ್ವೀಟ್ ಮಾಡಿರೋ ತಾಲಿಬಾನ್ ವಕ್ತಾರ ಸುಹೇಲ್ ಶಹೀನ್​, ಇವತ್ತು ಯೂರೋಪಿಯನ್ ಯೂನಿಯನ್, ಕೆನಡಾ, ಯುನೈಟೆಡ್ ಕಿಂಗ್​ಡಮ್, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಕೆನಡಾ​ ಮತ್ತು ಅಮೆರಿಕ​​ ಸೇರಿದಂತೆ ಹಲವು ದೇಶಗಳ ರಾಯಭಾರಿಗಳು ಮತ್ತು ಅಧಿಕಾರಿಗಳನ್ನು ಕತಾರ್​ನ ದೋಹಾದಲ್ಲಿ ಭೇಟಿಯಾಗಿದ್ದೀನಿ ಅಂತ ಹೇಳಿದ್ದಾರೆ. ಜೊತೆಗೆ ಈ ಸಭೆಯಲ್ಲಿ ಸುಹೇಲ್ ಶಹೀನ್​​, ಚಳಿಗಾಲದ ಒಳಗೆ ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವಿನ ಅಗತ್ಯತೆ ಇದೆ ಅಂತ ಮನವಿ ಮಾಡಿದ್ದಾರೆ. ಈ ವೇಳೆ ಇಸ್ಲಾಮಿಕ್ ಎಮಿರೇಟ್ಸ್​ ಆಫ್ ಅಫ್ಘಾನಿಸ್ತಾನದ ಅಧ್ಯಕ್ಷ ಮೌಲವಿ ಮಟಿವುಲ್ ಹಕ್ ನೇತೃತ್ವದ ನಿಯೋಗ ಕೂಡ ಸಭೆಯಲ್ಲಿ ಭಾಗಿಯಾಗಿತ್ತು.

-masthmagaa.com

Contact Us for Advertisement

Leave a Reply