ಪತ್ರಕರ್ತರ ಮೇಲಿನ ದೌರ್ಜನ್ಯದ ತನಿಖೆ ನಡೆಸಲು ತಾಲಿಬಾನ್ ಸಮಿತಿ!

masthmagaa.com:

ಅಪ್ಘಾನಿಸ್ತಾನದಲ್ಲಿ ಪತ್ರಕರ್ತರ ಮೇಲೆ ನಡೆದ ಹಿಂಸಾಚಾರದ ಕುರಿತು ತನಿಖೆ ನಡೆಸಲು ಒಂದು ಸಮಿತಿಯನ್ನು ರಚಿಸಿರೋದಾಗಿ ತಾಲಿಬಾನಿಗಳು ಘೋಷಿಸಿದ್ದಾರೆ. ತಾಲಿಬಾನಿಗಳು ಕಂಟ್ರೋಲ್​ಗೆ ಬಂದ್ಮೇಲೆ ಮಾಧ್ಯಮಗಳ ಮೇಲೆ ದೌರ್ಜನ್ಯ ಎಸಗ್ತಿದ್ದಾರೆ. ಪತ್ರಕರ್ತರ ಮೇಲೆ ಹಿಂಸಾಚಾರ ನಡೀತಾ ಇದೆ ಅನ್ನೋ ಘಟನೆಗಳು ವರದಿಯಾಗಿದ್ವು. ಇತ್ತೀಚೆಗೆ ಕಾಬೂಲ್​ನ ಲೋಕಲ್ ಟಿವಿ ಸ್ಟೇಷನ್​​ನ ಡೈರೆಕ್ಟರ್ ಒಬ್ಬರು ಶಸ್ತ್ರಾಸ್ತ್ರಧಾರಿಗಳು ಮನೆಗೆ ಬಂದು ನನ್ನ ವಾಹನ ಮತ್ತು ಇತರೆ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಅಂತ ಆರೋಪಿಸಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿರೋ ತಾಲಿಬಾನ್ ವಕ್ತಾರ ಜೈಬುಲ್ಲಾ ಮುಜಾಹಿದ್​​, ಪತ್ರಕರ್ತರ ಮೇಲೆ ಹಿಂಸಾಚಾರ ಮತ್ತು ದೌರ್ಜನ್ಯವನ್ನು ತಡೆಯಲು ಮತ್ತು ಈ ಬಗ್ಗೆ ತನಿಖೆ ನಡೆಸಲು ಮೂರು ಜನರ ಒಂದು ಕಮಿಟಿ ರಚಿಸಿದ್ದೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply