ಮಸೀದಿಯಲ್ಲಿ ಸ್ಫೋಟ: ಕನಿಷ್ಠ 50 ಮಂದಿ ಸಾವು

masthmagaa.com:

ಅಫ್ಘನಿಸ್ತಾನದ ಉತ್ತರ ಭಾಗದಲ್ಲಿರೋ ಕುಂದುಝ್​ ಪ್ರಾಂತ್ಯದ ಕುಂದುಝ್​​ ನಗರದಲ್ಲಿ ಮಸೀದಿಯೊಂದರ ಮೇಲೆ ಆತ್ಮಾಹುತಿ ದಾಳಿ ನಡೆದಿದೆ. ಶುಕ್ರವಾರವಾದ ಇವತ್ತು ಪ್ರಾರ್ಥನೆಗೆ ಅಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ಮಸೀದಿಗೆ ಬಂದಿದ್ದರು. ಈ ವೇಳೆ ಸ್ಫೋಟಕದೊಂದಿಗೆ ಮಸೀದಿಗೆ ಬಂದಿದ್ದ ವ್ಯಕ್ತಿ ತನ್ನನ್ನ ತಾನು ಸ್ಫೋಟಿಸಿಕೊಂಡಿದ್ದಾನೆ. ಘಟನೆಯಲ್ಲಿ ಕನಿಷ್ಠ 50 ಜನ ಮೃತಪಟ್ಟಿದ್ದು, ಅಷ್ಟೇ ಜನ ಗಾಯಗೊಂಡಿರಬಹುದು ಅಂತ ವರದಿಯಾಗಿದೆ. ಅಂದ್ಹಾಗೆ ದಾಳಿ ನಡೆದಿದ್ದು ಶಿಯಾ​ ಮುಸ್ಲಿಮರಿಗೆ ಸೇರಿದ ಮಸೀದಿಯಲ್ಲಿ. ಮುಸ್ಲಿಂ ರಾಷ್ಟ್ರವಾದ ಅಫ್ಘನಿಸ್ತಾನದಲ್ಲಿ ಶಿಯಾ ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದಾರೆ. ಕುಂದುಝ್​ ನಗರ ತಜಕಿಸ್ತಾನ ಗಡಿಗೆ ಹತ್ತಿರದಲ್ಲಿದೆ. ದಾಳಿಯ ಹೊಣೆಯನ್ನ ಇದುವರೆಗೆ ಯಾವ ಉಗ್ರ ಸಂಘಟನೆಯೂ ಹೊತ್ತುಕೊಂಡಿಲ್ಲ. ಕಳೆದ ವಾರ ಕಾಬೂಲ್​ನಲ್ಲೂ ಇಂಥದ್ದೇ ದಾಳಿಯನ್ನ ಐಎಸ್​ ಉಗ್ರ ಸಂಘಟನೆ ಮಾಡಿತ್ತು.

-masthmagaa.com

Contact Us for Advertisement

Leave a Reply