ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಹೊಸ ರೂಲ್ಸ್​!

masthmagaa.com:

ಅಫ್ಘಾನಿಸ್ತಾನದ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರಿಗೆ ತಾಲಿಬಾನಿಗಳು ಒಂದಷ್ಟು ರೂಲ್ಸ್ ಫಿಕ್ಸ್ ಮಾಡಿದ್ದಾರೆ. ಈ ವಿವಿಗಳಲ್ಲಿ ಓದೋ ಮಹಿಳೆಯರು ಬುರ್ಖಾ ಧರಿಸಬೇಕು. ಬಹುತೇಕ ಮುಖ ಕವರ್ ಮಾಡೋ, ಕಣ್ಣು ಮಾತ್ರ ಕಾಣಿಸುವಂತಹ ನಿಕಾಬ್ ಧರಿಸಬೇಕು.. ವಿವಿಗಳಲ್ಲಿ ಹುಡುಗಿಯರು ಮತ್ತು ಹುಡುಗರಿಗೆ ಪ್ರತ್ಯೇಕವಾಗಿ ಪಾಠ ಮಾಡಬೇಕು. ಸಪರೇಟ್ ಕ್ಲಾಸ್ ಆಗದೇ ಇದ್ರೂ ಹುಡುಗರು ಮತ್ತು ಹುಡುಗಿಯರ ನಡುವೆ ಒಂದು ಕರ್ಟನ್ ಅದ್ರೂ ಇರಬೇಕು ಅಂತ ತಾಲಿಬಾನ್​​ನ ಶಿಕ್ಷಣ ಪ್ರಾಧಿಕಾರ ದಾಖಲೆ ಬಿಡುಗಡೆ ಮಾಡಿದೆ. ಹುಡುಗಿಯರಿಗೆ ಒಂದೋ ಮಹಿಳಾ ಶಿಕ್ಷಕರು ಪಾಠ ಮಾಡ್ಬೇಕು. ಅದು ಸಾಧ್ಯವಾಗದೇ ಇದ್ರೆ ಒಳ್ಳೆಯ ವ್ಯಕ್ತಿತ್ವದ ವೃದ್ಧರು ಪಾಠ ಮಾಡ್ಬೋದು.. ಹುಡುಗಿಯರಿಗೆ ಹುಡುಗರಿಗಿಂತ 5 ನಿಮಿಷ ಮುನ್ನ ಪಾಠ ನಿಲ್ಲಿಸಿ, ಹೊರಗೆ ಕಳುಹಿಸಬೇಕು. ಈ ಮೂಲಕ ಕ್ಲಾಸ್ ಮುಗಿದ ಬಳಿಕ ಹುಡುಗರು, ಹುಡುಗಿಯರು ಹೊರಗೆ ಮಿಂಗಲ್ ಆಗೋದನ್ನ ತಪ್ಪಿಸಬೇಕು ಅಂತ ಆದೇಶಿಸಲಾಗಿದೆ. ಅಂದಹಾಗೆ 1996ರಿಂದ 2001ರವರೆಗೆ ತಾಲಿಬಾನಿಗಳು ಅಧಿಕಾರದಲ್ಲಿದ್ದಾಗ ಮಹಿಳೆಯರು ಮನೆಯಿಂದ ಹೊರಬರಬೇಕಾದ್ರೂ ಬುರ್ಕಾ, ಹಿಜಬ್ ಧರಿಸಬೇಕಾಗ್ತಿತ್ತು. ಆದ್ರೆ 2001ರಿಂದ ಈ ಸಂಪ್ರದಾಯ ಕಾಬೂಲ್​​ನಲ್ಲಿ ಬಹುತೇಕ ಹೋಗಿದೆ. ಕೆಲ ಹಳ್ಳಿಗಳಲ್ಲಿ ಮಾತ್ರವೇ ಉಳಿದುಕೊಂಡಿದೆ. ಆದ್ರೀಗ ಅದೇ ಕಾಲಕ್ಕೆ ವಾಪಸ್ ಹೋಗ್ತಿದೆ ಅಫ್ಘಾನಿಸ್ತಾನ. ಇದ್ರ ಬೆನ್ನಲ್ಲೇ ಅಫ್ಘಾನಿಸ್ತಾನದ ಮಹಿಳೆಯರು ತಮ್ಮ ದೇಹವನ್ನು ಕಂಪ್ಲೀಟಾಗಿ ಕವರ್ ಮಾಡಿಕೊಳ್ಳಲು ಬೇಕಾದ ಬುರ್ಕಾ ಮತ್ತು ಹಿಜಬ್​ಗಳನ್ನು ಖರೀದಿಸೋಕೆ ಶುರು ಮಾಡಿದ್ದಾರೆ. ಯಾಕಂದ್ರೆ ತಾಲಿಬಾನಿಗಳು ಈ ಹಿಂದೆ ಅಧಿಕಾರದಲ್ಲಿದ್ದಾಗ ಬುರ್ಕಾ, ಹಿಜಬ್ ಹಾಕದೇ ಮಹಿಳೆಯರು ಮನೆಯಿಂದ ಹೊರಗೆ ಬರೋಕೆ ಬಿಡ್ತಿರಲಿಲ್ಲ. ಒಂದ್ವೇಳೆ ಬಂದ್ರೆ ಅವರನ್ನು ಹೊಡೆಯೋದು, ಹತ್ಯೆ ಮಾಡೋದು ಮಾಡ್ತಿದ್ರು. ಈಗ ಅದೇ ರೀತಿಯ ವಾತಾವರಣ ಮತ್ತೆ ಸೃಷ್ಟಿಯಾಗ್ತಿದೆ.

-masthmagaa.com

Contact Us for Advertisement

Leave a Reply