ಅಫ್ಘನ್-ಪಾಕ್ ನಡುವೆ ಗಡಿಯುದ್ಧ ಜೋರು! ಇಮ್ರಾನ್​ಗೆ ಶಾಕ್!

masthmagaa.com:

ಅಫ್ಘಾನಿಸ್ತಾನದ ಘೊರುಸ್ಟೆಯ ಗಡಿಯ ಡುರಾಂಡ್​​​ ಲೈನ್​​ನಲ್ಲಿ ಪಾಕಿಸ್ತಾನದ ಸೇನೆ ನಿರ್ಮಿಸಿದ್ದ ಮುಳ್ಳುತಂತಿಯ ಬೇಲಿಯನ್ನು ತಾಲಿಬಾನಿಗಳು ನಾಶಪಡಿಸಿದ್ದಾರೆ. ಡ್ಯುರಂಡ್ ಲೈನ್​​ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನವನ್ನು ಬೇರ್ಪಡಿಸೋ ಗಡಿರೇಖೆಯಾಗಿದೆ. ಡ್ಯುರಂಡ್ ಅನ್ನೋದು ಈ ಗಡಿರೇಖೆ ಎಳೆದ ಬ್ರಿಟಿಷ್ ಅಧಿಕಾರಿಯ ಹೆಸರು. ಇದು ಸುಮಾರು 2670 ಕಿಲೋಮೀಟರ್ ಇದೆ. ಆದ್ರೆ ಈ ಗಡಿಯನ್ನು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳೆರಡೂ ಒಪ್ಪಿಕೊಳ್ಳೋದಿಲ್ಲ. ಇವರ ನಡುವೆ ಗಡಿ ವಿವಾದ ಇದ್ದು, ಸರಿಯಾದ ಬೇಲಿ ವ್ಯವಸ್ಥೆಯೇ ಇರಲಿಲ್ಲ. ಇದೀಗ ತಾಲಿಬಾನಿಗಳು ಬಂದ ಬಳಿಕ ಪಾಕಿಸ್ತಾನ ಸರ್ಕಾರ ಬೇಲಿ ಕಟ್ಟೋಕೆ ಮುಂದಾಗಿದ್ದು, ಬಹುತೇಕ ನಿರ್ಮಾಣ ಕಾರ್ಯ ಮುಗಿದಿದೆ. ಆದ್ರೆ ಘೊರುಸ್ಟೆ ಭಾಗದಲ್ಲಿ ಅದನ್ನು ತಾಲಿಬಾನಿಗಳು ನಾಶ ಮಾಡ್ತಿದ್ದಾರೆ.

-masthmagaa.com

Contact Us for Advertisement

Leave a Reply