ಒಂದೆರಡು ವಾರದಲ್ಲಿ ತಾಲಿಬಾನ್ ಕ್ಯಾಬಿನೆಟ್ ರೆಡಿ!

masthmagaa.com:

ಸ್ಥಳಾಂತರ ಪ್ರಕ್ರಿಯೆ ಮುಗಿಯುತ್ತಾ ಬರ್ತಿದ್ದಂತೆ ತಾಲಿಬಾನಿಗಳ ಸರ್ಕಾರ ರಚನೆ ಪ್ರಕ್ರಿಯೆ ಕೂಡ ಚುರುಕು ಪಡೆದುಕೊಂಡಿದೆ. ಹೊಸ ಕ್ಯಾಬಿನೆಟ್ ರಚನೆಗೆ ಎಲ್ಲಾ ರೀತಿಯ ಸಿದ್ಧತೆ ನಡೆಸ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ತಾಲಿಬಾನ್ ವಕ್ತಾರ ಝೈಬುಲ್ಲಾ ಮುಜಾಹಿದ್​, ಸ್ಥಳಾಂತರ ಪ್ರಕ್ರಿಯೆ ಬಳಿಕ ಒಂದೆರಡು ವಾರದೊಳಗೆ ಹೊಸ ಕ್ಯಾಬಿನೆಟ್ ಬಗ್ಗೆ ಘೋಷಣೆ ಮಾಡ್ತೀವಿ ಅಂತ ಹೇಳಿದ್ದಾರೆ. ಇನ್ನು ಐಎಸ್​ಕೆ ಉಗ್ರರ ಮೇಲೆ ಅಮೆರಿಕ ನಡೆಸಿರೋ ದಾಳಿಯನ್ನು ಖಂಡಿಸಿರೋ ಝೈಬುಲ್ಲಾ, ಇದು ಅಫ್ಘಾನಿಸ್ತಾನದ ಪ್ರದೇಶದ ಮೇಲೆ ನಡೆದ ದಾಳಿ ಅಂತ ಹೇಳಿದ್ದಾರೆ. ಅದ್ರ ಜೊತೆಗೆ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಸ್ಥಳಾಂತರ ಪ್ರಕ್ರಿಯೆ ಬಳಿಕವೂ ರಾಜತಾಂತ್ರಿಕ ಸಂಬಂಧ ಮುಂದುವರಿಸಬೇಕು ಅಂತ ಮನವಿ ಕೂಡ ಮಾಡಿದ್ದಾರೆ. ಅಂದಹಾಗೆ ತಾಲಿಬಾನಿಗಳು ಈಗಾಗಲೇ ಪ್ರಮುಖ ಸಚಿವಾಲಯಗಳಿಗೆ ಸಚಿವರನ್ನು ನೇಮಿಸಿದೆ. ಆರೋಗ್ಯ, ಶಿಕ್ಷಣ ಮತ್ತು ಸೆಂಟ್ರಲ ಬ್ಯಾಂಕ್​​ಗೆ ಅಧಿಕಾರಿಗಳನ್ನು ನೇಮಿಸಿಯಾಗಿದೆ ಅಂತ ನಿನ್ನೆಯಷ್ಟೇ ಝೈಬುಲ್ಲಾ ಮಾಹಿತಿ ನೀಡಿದ್ದಾರೆ. ಬ್ಯಾಂಕುಗಳನ್ನು ತೆರೆಯುವಂತೆಯೂ ಆದೇಶ ಹೊರಡಿಸಿರೋ ತಾಲಿಬಾನ್​, ವಾರಕ್ಕೆ 20 ಸಾವಿರ ಅಫ್ಘನಿಗಳನ್ನು ಮಾತ್ರ ತೆಗೆಯುವಂತೆ ಲಿಮಿಟ್ ಕೂಡ ಫಿಕ್ಸ್ ಮಾಡಿದೆ.

-masthmagaa.com

Contact Us for Advertisement

Leave a Reply