IS ಉಗ್ರರ ವಿರುದ್ಧ ತಾಲಿಬಾನ್ ಕಾರ್ಯಾಚರಣೆ

masthmagaa.com:

ನಾವು IS ಉಗ್ರರ ಘಟಕವೊಂದನ್ನ ನಾಶ ಮಾಡಿದ್ದೇವೆ ಅಂತ ತಾಲಿಬಾನ್ ಘೋಷಿಸಿದೆ. ಕಾಬುಲ್ ಮೆಲೆ ಮಸೀದಿಯೊಂದರ ಮೇಲೆ ದಾಳಿ ಮಾಡಿದ್ದ IS ಉಗ್ರರು 5 ಜನರ ಸಾವಿಗೆ ಕಾರಣ ಆಗಿದ್ರು. ಇದಕ್ಕೆ ಪ್ರತೀಕಾರದ ದಾಳಿ ಮಾಡಿ ನಾವು ಅವರ ಇಡೀ ಸೆಲ್ ಅನ್ನೇ ನಾಶ ಮಾಡಿದ್ದೇವೆ. ಅದರಲ್ಲಿದ್ದ IS ಉಗ್ರರನ್ನ ಹತ್ಯೆ ಮಾಡಿದ್ದೇವೆ ಅಂತ ತಾಲಿಬಾನ್ ವಕ್ತಾರ ಜಹೀಬುಲ್ಲಾ ಮುಜಾಹಿದ್ ಹೇಳಿಕೆ ನೀಡಿದ್ದಾರೆ. ತಾಲಿಬಾನ್ ಕಡೆಯಿಂದ ಬಂದ ದೊಡ್ಡ ಪ್ರಮಾಣದ ಭದ್ರತಾ ಸಿಬ್ಬಂದಿ ಬಂದು ಮೂರು ಮನೆಗಳ ಮೇಲೆ ರೇಡ್ ಮಾಡಿದ್ರು. ಸ್ಫೋಟ ಹಾಗೂ ಗುಂಡಿನ ಸದ್ದು ಕೇಳಿಸ್ತು ಅಂತ ಸ್ಥಳೀಯರು ಹಾಗೂ ಅಲ್ಲಿನ ಪತ್ರಕರ್ತರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply