ಅಫ್ಘಾನಿಸ್ತಾನ ವಿಚಾರವಾಗಿ ಇವತ್ತು ಸರ್ವಪಕ್ಷ ಸಭೆ: ಏನಾಯ್ತು ಗೊತ್ತಾ?

masthmagaa.com:

ಅಫ್ಘನಿಸ್ತಾನ ಪರಿಸ್ಥಿತಿಗೆ ಸಂಬಂಧಿಸಿದಂತೆ ಇವತ್ತು ಸರ್ವಪಕ್ಷಗಳ ಸಭೆ ನಡೀತು. ಮೂರೂವರೆ ಗಂಟೆ ಕಾಲ ನಡೆದ ಸಭೆಯಲ್ಲಿ ವಿಪಕ್ಷ ನಾಯಕರಿಗೆ ಅಫ್ಘನ್​ ಪರಿಸ್ಥಿತಿ ಬಗ್ಗೆ ವಿಸ್ತೃತ ವಿವರಣೆ ಕೊಡಲಾಯ್ತು. ವಿಪಕ್ಷ ನಾಯಕರು ಪ್ರಶ್ನೆಗಳಿಗೆ ಉತ್ತರ ನೀಡಲಾಯ್ತು. ಸಭೆ ಬಳಿಕ ಮಾತನಾಡಿದ ವಿದೇಶಾಂಗ ಸಚಿವ ಎಸ್​. ಜೈಶಂಕರ್, ಅಫ್ಘನಿಸ್ತಾನದಲ್ಲಿರೋ ಬಹುತೇಕ ಭಾರತೀಯರನ್ನ ಕರೆಸಿಕೊಂಡಿದ್ದೇವೆ ಎಂದಿದ್ದಾರೆ. ಇನ್ನು ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ನೀಡೋ ಬಗ್ಗೆ ಮಾತನಾಡಿದ ಜೈಶಂರ್, ಅದರ ಬಗ್ಗೆ ನಾವು ಇತರ ದೇಶಗಳ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಕಳೆದೆರಡು ದಿನದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಜರ್ಮನಿ ಚಾನ್ಸೆಲರ್ ಮರ್ಕೆಲ್​​ ಜೊತೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಇಂಥಾ ಮತ್ತಷ್ಟು ಮೀಟಿಂಗ್​ ನಡೆಯಲಿವೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply