ಮಹಿಳಾ ಸಚಿವಾಲಯ ಬಂದ್ ಮಾಡಿದ ತಾಲಿಬಾನ್​!

masthmagaa.com:

ಅಫ್ಘಾನಿಸ್ತಾನ ಟೇಕೋವರ್ ಮಾಡಿಕೊಂಡ ಬಳಿಕ ನಾವು ಒಳ್ಳೆ ರೀತಿಲಿ ಆಡಳಿತ ನಡೆಸ್ತೀವಿ ಅಂದಿದ್ದ ತಾಲಿಬಾನಿಗಳು ಈಗ ಅವೆಲ್ಲವನ್ನೂ ಮರೆತುಬಿಟ್ಟಂತಿದೆ. ಯಾಕಂದ್ರೆ ಮತ್ತೆ ತಮ್ಮ ಹಳೆಯ ದುರಾಡಳಿತಕ್ಕೆ ಮರಳೋ ಎಲ್ಲಾ ಲಕ್ಷಣಗಳನ್ನು ತೋರಿಸ್ತಿದ್ದಾರೆ. ಇದೀಗ ಮಹಿಳಾ ಸಚಿವಾಲಯವನ್ನು ಬಂದ್ ಮಾಡಿ, ಅದರ ಜಾಗದಲ್ಲಿ ನೈತಿಕತೆ ಅಥವಾ ದುರ್ನಡತೆ ನಿರ್ಮೂಲನಾ ಸಚಿವಾಲಯವನ್ನು ಸ್ಥಾಪನೆ ಮಾಡಿದೆ. ಮಹಿಳಾ ಸಚಿವಾಲಯದ ಕಟ್ಟಡದ ಮೇಲಿದ್ದ ಬೋರ್ಡ್​ ತೆಗೆದು ಆ ಜಾಗದಲ್ಲಿ ದರಿ ಮತ್ತು ಅರೇಬಿಕ್ ಭಾಷೆಯಲ್ಲಿ ನೈತಿಕತೆ ಮತ್ತು ದುರ್ನಡತೆ ನಿರ್ಮೂಲನಾ ಸಚಿವಾಲಯ ಅಂತ ಬರೆಯಲಾಗಿದೆ. ಮೊದಲು ಈ ತಾಲಿಬಾನಿಗಳಲ್ಲಿರೋ ದುರ್ನಡತೆ ತೊಲಗಬೇಕು. ಆಮೇಲೆ ಉಳಿದವರ ದುರ್ನಡತೆ ನಿರ್ಮೂಲನೆ ಮಾಡಲು ಇವರು ಕೆಲಸ ಮಾಡ್ಬೋದು. ಇವರಲ್ಲೇ ದುರ್ನಡನೆ ಉಕ್ಕುತ್ತಿರೋವಾಗ ಬೇರೆಯವರ ದುರ್ನಡತೆ ನಿರ್ಮೂಲನೆಗೆ ಸಚಿವಾಲಯ ಸ್ಥಾಪನೆ ಮಾಡಿದ್ದಾರೆ. ಬರೀ ಹೆಸರು ಚೇಂಜ್ ಮಾಡಿದ್ದಲ್ಲ. .ಅಲ್ಲಿದ್ದ ಎಲ್ಲಾ ಮಹಿಳಾ ಸಿಬ್ಬಂದಿಯನ್ನು ಕೂಡ ಹೊರಹಾಕಲಾಗಿದೆ.

-masthmagaa.com

Contact Us for Advertisement

Leave a Reply