ಭಾರತದಲ್ಲಿ ಮತ್ತೆ ಅಫ್ಘಾನ್ ರಾಯಭಾರಿ ಕಚೇರಿ ಓಪನ್‌ ಮಾಡ್ತೀವಿ: ತಾಲಿಬಾನ್‌

masthmagaa.com:

ಇತ್ತೀಚೆಗೆ ಮುಚ್ಚಲಾಗಿದ್ದ ಭಾರತದಲ್ಲಿನ ಅಫ್ಘಾನಿಸ್ತಾನ ರಾಯಭಾರಿ ಕಚೇರಿಯನ್ನ ಮತ್ತೆ ತೆರೆಯೋದಾಗಿ ತಾಲಿಬಾನ್‌ ಹೇಳಿದೆ. ಈ ಕುರಿತು ಮಾಹಿತಿ ನೀಡಿರೋ ತಾಲಿಬಾನ್‌ ಉಪ ವಿದೇಶಾಂಗ ಸಚಿವ ಮೊಹ್ಮದ್‌ ಅಬ್ಬಾಸ್‌ ಸ್ಟಾನೆಜ್ಕೈ, ಮುಂಬೈ ಹಾಗೂ ಹೈದ್ರಾಬಾದನಲ್ಲಿರುವ ಕೌನ್ಸುಲೇಟ್‌ ಕಚೇರಿಗಳು ನಮ್ಮ ವಿದೇಶಾಂಗ ಸಚಿವಾಲಯದ ಜೊತೆ ಸಂಪರ್ಕದಲ್ಲಿವೆ. ಜೊತೆಗೆ ಕಳೆದ ವಾರ ದೆಹಲಿಯಲ್ಲಿ ಮುಚ್ಚಲಾಗಿರುವ ನಮ್ಮ ರಾಯಭಾರಿ ಕಚೇರಿಯನ್ನ ಕೆಲವೇ ದಿನಗಳಲ್ಲಿ ಆರಂಭಿಸಲಾಗುತ್ತೆ ಅಂತ ಹೇಳಿದ್ದಾರೆ. ಅಂದಹಾಗೆ ಅಫ್ಘಾನ್‌ನಲ್ಲಿದ್ದ ಈ ಹಿಂದಿನ ಸರ್ಕಾರ ನಿಯೋಜಿಸಿದ್ದ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಭಾರತ ಸಹಕಾರ ಕೊಡ್ತಿಲ್ಲ ಅಂತ ಅಪ್ಘಾನ್‌ ಅಧಿಕಾರಿಗಳು ಕ್ಲೋಸ್‌ ಮಾಡಿದ್ದರು. ಆದ್ರೆ ಈಗ ತಾಲಿಬಾನ್‌ ಸರ್ಕಾರದ ಜೊತೆ ಭಾರತದ ರಾಜತಾಂತ್ರಿಕ ಸಂಬಂಧ ವೃದ್ದಿಯಾದ ಹಿನ್ನಲೆ ತಾಲಿಬಾನ್‌ ತನ್ನ ರಾಯಭಾರಿ ಕಚೇರಿಗಳನ್ನ ಸಕ್ರಿಯಗೊಳಿಸುತ್ತಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply