ತಾಲಿಬಾನಿಗಳು ಬದಲಾಗಿದ್ದು ನಿಜವಾಗಿಯೂ ಹೌದಾ..?

masthmagaa.com:

ತಾಲಿಬಾನಿಗಳು ನಾವು ಬದಲಾಗಿದ್ದೀವಿ ಅಂತ ಹೇಳಿದ್ರೂ ಕೆಲವೊಂದುಕಡೆ ಅವರು ಹೇಳೋದಕ್ಕೂ, ಮಾಡೋದಕ್ಕೂ ಸಂಬಂಧವಿಲ್ಲ ಅನ್ನೋಥರ ಇದೆ. ಇದೀಗ ಸರ್ಕಾರಿ ಕಚೇರಿಗಳನ್ನ ತೆರೆಯಲು, ಕಚೇರಿಗೆ ಹೋಗಿ ನೌಕರರು ಕೆಲಸ ಮಾಡಲು ತಾಲಿಬಾನಿಗಳು ಬಿಡ್ತಿಲ್ಲ ಅಂತ ವರದಿಯಾಗಿದೆ. ಅಫ್ಘನಿಸ್ತಾನದಲ್ಲಿ ಕಳೆದ ಕೆಲವೇ ಕೆಲವು ಖಾಸಗಿ ಮಾಧ್ಯಮಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಮಾಧ್ಯಮದ ನೌಕರರು ಕಚೇರಿಗೆ ಬಂದ್ರೆ, ಗೇಟಲ್ಲಿ ನಿಂತ್ಕೊಂಡಿರೋ ತಾಲಿಬಾನಿಗಳು ಸರ್ಕಾರಿ ನೌಕರರನ್ನ ತಡೆದು, ಸರ್ಕಾರಿ ಕಚೇರಿ ತೆರೆಯೋಕೆ ನಮಗಿನ್ನೂ ಮೇಲಿಂದ ಆದೇಶ ಬಂದಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply