ಅಮೆರಿಕ ವಿರುದ್ದ ಹಲ್ಲು ಕಡಿದ ತಾಲಿಬಾನ್!

masthmagaa.com:

ಅಮೆರಿಕ ವಾಯುನೆಲೆ ಸ್ಥಾಪನೆಗೆ ತಮ್ಮ ನೆಲದಲ್ಲಿ ಯಾರೂ ಅವಕಾಶ ನೀಡಬಾರದು ಅಂತ ತನ್ನ ನೆರೆ ಹೊರೆಯ ದೇಶಗಳಿಗೆ ತಾಲಿಬಾನ್ ಎಚ್ಚರಿಕೆ ನೀಡಿದೆ. ಅಂದಹಾಗೆ ಸೆಪ್ಟೆಂಬರ್ 11ರೊಳಗೆ ಅಫ್ಘಾನಿಸ್ತಾನದಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳೋದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘೋಷಿಸಿದ್ದಾರೆ. ಆದ್ರೂ ಕೂಡ ಅಫ್ಘಾನಿಸ್ತಾನದ ಸುತ್ತಮುತ್ತಲಿನ ದೇಶಗಳಲ್ಲಿ ಅಮೆರಿಕ ವಾಯುನೆಲೆ ಸ್ಥಾಪನೆಗೆ ಮುಂದಾಗ್ತಿದೆ ಅನ್ನೋ ವರದಿಗಳು ಬರ್ತಿವೆ. ಇತ್ತೀಚೆಗಷ್ಟೇ ಪಾಕಿಸ್ತಾನ ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಉದ್ದೇಶದಿಂದ ವಾಯುಪ್ರದೇಶ ಮತ್ತು ವಾಯುನೆಲೆ ಸ್ಥಾಪನೆಗೆ ಅವಕಾಶ ನೀಡಿದೆ ಅಂತ ಅಮೆರಿಕ ಹೇಳಿಕೊಂಡಿತ್ತು. ಇದಾದ ಬಳಿಕ ಪಾಕ್​​​​ ತಾನು ಅಮೆರಿಕ ಜೊತೆ ಈ ರೀತಿಯ ಯಾವುದೇ ಒಪ್ಪಂದ ಮಾಡ್ಕೊಂಡಿಲ್ಲ.. ಎಲ್ಲಾ ಸುಳ್ಳು ಅಂತ ಹೇಳಿತ್ತು. ಹೀಗಾಗಿ ತಾಲಿಬಾನ್ ತನ್ನ ನೆರೆಹೊರೆಯ ದೇಶಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಅಮೆರಿಕ ವಾಯುನೆಲೆಗೆ ಯಾರೂ ಅವಕಾಶ ಕೊಡಬಾರದು. ಒಂದು ವೇಳೆ ಅವಕಾಶ ಕೊಟ್ರೆ ಅದೊಂದು ಐತಿಹಾಸಿಕ ತಪ್ಪಾಗುತ್ತೆ. ಅದ್ನ ನೋಡಿ ನಾವು ಕೂಡ ಸುಮ್ಮನಿರಲ್ಲ ಅಂತ ಹೇಳಿದೆ. ಆದ್ರೆ ಯಾವ ದೇಶದ ಹೆಸರನ್ನೂ ಕೂಡ ಉಲ್ಲೇಖಿಸಿಲ್ಲ.

-masthmagaa.com

Contact Us for Advertisement

Leave a Reply