ಶೀಘ್ರದಲ್ಲೇ ಸರ್ಕಾರ ರಚನೆ: ತಾಲಿಬಾನ್ ಅಧಿಕೃತ ಘೋಷಣೆ

masthmagaa.com:

ಪಂಜ್​ಶಿರ್​ನಲ್ಲಿ ಇಷ್ಟೆಲ್ಲಾ ಆಗ್ತಿದ್ರೆ ಮತ್ತೊಂದ್ಕಡೆ ಕಾಬೂಲ್​ನಲ್ಲಿ ಹೊಸ ಸರ್ಕಾರ ರಚನೆ ಸಂಬಂಧ ಚರ್ಚೆ ಜೋರಾಗಿದೆ. ಅಫ್ಘಾನಿಸ್ತಾನ ಮಾಜಿ ಅಧ್ಯಕ್ಷ ಹಮೀದ್ ಖರ್ಝೈ ಮತ್ತು ಚೀಫ್ ಎಕ್ಸಿಕ್ಯುಟಿವ್ ಆಫ್ ಅಫ್ಘಾನಿಸ್ತಾನ ಆಗಿ ಕೆಲಸ ಮಾಡಿದ್ದ ಅಬ್ದುಲ್ಲಾ ಅಬ್ದುಲ್ಲಾ ಅವರ ಜೊತೆ ತಾಲಿಬಾನ್ ಪೊಲಿಟಿಕಲ್ ಆಫೀಸ್ ಸದಸ್ಯರು ಭೇಟಿಯಾಗಿದ್ದಾರೆ. ಈ ವೇಳೆ ಅಫ್ಘಾನಿಸ್ತಾನದ ಭದ್ರತೆ, ರಾಜಕೀಯ ಬೆಳವಣಿಗೆ ಮತ್ತು ಎಲ್ಲರನ್ನು ಒಳಗೊಂಡ ಸರ್ಕಾರ ರಚನೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದಾದ ಬಳಿಕ ಪ್ರತಿಕ್ರಿಯಿಸಿರೋ ತಾಲಿಬಾನ್​, ಸದ್ಯದಲ್ಲೇ ಹೊಸ ಸರ್ಕಾರದ ಘೋಷಣೆಯಾಗಲಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply