ಗಣೇಶ್‌ ಮತ್ತು ಶಿವಣ್ಣ ಸಿನಿಮಾಗೆ ತಮಿಳು ನಿರ್ದೇಶಕ ಆಕ್ಷನ್‌ ಕಟ್‌ ?

masthmagaa.com:

ಗಣೇಶ್‌ ಮತ್ತು ಶಿವಣ್ಣ ಸದ್ದಿಲ್ಲದೇ ಮಲ್ಟಿ ಸ್ಟಾರರ್‌ ಮೂವಿ ಮಾಡ್ತಾ ಇದಾರೆ ಅನ್ನೊ ಗಾಳಿ ಸುದ್ದಿ ಹರಿದಾಡ್ತಾ ಇರೋ ಹೊತ್ತಲ್ಲೇ ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್‌ ಆಗಿದೆ. ಇದೀಗ ಆ ಚಿತ್ರಕ್ಕೆ ಸ್ಟಾರ್ ನಿರ್ದೇಶಕರೊಬ್ಬರ ಎಂಟ್ರಿಯಾಗಿದೆ. ಈಗಾಗಲೇ ಆ ನಿರ್ದೇಶಕರು ಇಬ್ಬರೂ ನಟರನ್ನು ಭೇಟಿ ಮಾಡಿ ಮಾತುಕತೆ ಕೂಡ ನಡೆಸಿದ್ದಾರೆ. ಶಿವರಾಜ್‌ಕುಮಾರ್‌ ಸದ್ಯ ಮಲ್ಟಿ ಸ್ಟಾರರ್‌ ಮೂವಿಗಳನ್ನೇ ಜಾಸ್ತಿ ಮಾಡ್ತಾ ಇದ್ದು, ತಮಿಳಿನ ರಜನಿಕಾಂತ್‌ ಮತ್ತು ಧನುಷ್‌ ಅವರ ಜೊತೆನೂ ಮಲ್ಟಿ ಸ್ಟಾರರ್‌ ಮೂವಿಯಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಈ ಹಿಂದೆ ಉಪೇಂದ್ರ, ಸುದೀಪ್, ರವಿಚಂದ್ರನ್ ಸೇರಿದಂತೆ ಹಲವು ಕಲಾವಿದರ ಜೊತೆಗೆ ಶಿವಣ್ಣ ತೆರೆ ಹಂಚಿಕೊಂಡಿದ್ದಾರೆ.ಈಗ ಇದೇ ಮೊದಲ ಬಾರಿಗೆ ಶಿವಣ್ಣ ಮತ್ತು ಗಣೇಶ್ ಕಾಂಬಿನೇಷನ್‌ನಲ್ಲಿ ಸಿನಿಮಾ ಸೆಟ್ಟೇರ್ತಾ ಇದೆ. ಶಿವಣ್ಣ ಮತ್ತು ಗಣೇಶ್‌ ಕಾಂಬಿನೇಷನ್‌ನಲ್ಲಿ ಇದು ಮೊದಲ ಮೂವಿಯಾಗಿದ್ರಿಂದ ಈ ಚಿತ್ರ ಸ್ಪೆಷಲ್‌ ಅಂತಾನೆ ಹೇಳಬಹುದು. ಇನ್ನು ಈ ಸಿನಿಮಾಗೆ ರಜನಿಕಾಂತ್‌, ಸೂರ್ಯ, ಹೀಗೆ ತಮಿಳಿನ ಸೂಪರ್‌ ಸ್ಟಾರ್‌ಗಳ ಜೊತೆಗೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನುಕೊಟ್ಟಿರುವ ಕೆ.ಎಸ್.ರವಿಕುಮಾರ್ ಈ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ ಎನ್ನುವ ಅನಧಿಕ್ರತ ಮಾಹಿತಿ ಹೊರಬಿದ್ದಿದೆ. ಈ ಹಿಂದೆ ಅವರು ಸುದೀಪ್ ನಟನೆಯ ಕೋಟಿಗೊಬ್ಬ 2 ಸಿನಿಮಾಗೆ ನಿರ್ದೇಶನವನ್ನು ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತಿರುವ ಒಂದು ಫೋಟೊ ಈ ಒಂದು ವದಂತಿಗೆ ಪುಷ್ಠಿ ನೀಡುತ್ತಿದೆ. ಈ ಫೋಟೊದಲ್ಲಿ ನಿರ್ಮಾಪಕ ಸೂರಪ್ಪ ಬಾಬು ಜೊತೆ ಶಿವರಾಜ್ ಕುಮಾರ್, ಗಣೇಶ್ ಮತ್ತು ರವಿಕುಮಾರ್‌ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply