masthmagaa.com:

ದೇಶದಲ್ಲಿ ಭಾರಿ ಜೋಷ್​ನಿಂದ ಶುರುವಾದ ಕೊರೋನಾ ಲಸಿಕೆ ಅಭಿಯಾನ ಊಹಿಸಿದಷ್ಟು ಸ್ಫೀಡ್​ನಲ್ಲಿ ನಡೀತಿಲ್ಲ. ಇದಕ್ಕೆ ಪ್ರಮುಖ ಕಾರಣ ಲಸಿಕೆ ಬಗ್ಗೆ ಜನರಿಗಿರುವ ಭಯ. ಈ ಭಯವನ್ನ ದೂರ ಮಾಡೋಕೆ ರಾಜಕಾರಣಿಗಳು ಕೂಡ ಮುಂದಾಗ್ತಿಲ್ಲ. ತಾವು ಲಸಿಕೆ ಹಾಕ್ಕೊಂಡು ಉಳಿದವರಿಗೆ ಮಾದರಿಯಾಗ್ತಿಲ್ಲ. ಆದ್ರೆ ತಮಿಳುನಾಡು ಆರೋಗ್ಯ ಸಚಿವ ವಿಜಯಭಾಸ್ಕರ್ ಮಾತ್ರ ತಾವು ಬೇರೆಯವರಿಗಿಂತ ಡಿಫ್ರೆಂಟ್ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಲಸಿಕೆ ಬಗ್ಗೆ ಜನರಿಗಿರುವ ಭಯವನ್ನ ಹೋಗಲಾಡಿಸಲು ಇವತ್ತು ಅವರೇ ಸ್ವಯಂಪ್ರೇರಿತರಾಗಿ ಚೆನ್ನೈನ ಆಸ್ಪತ್ರೆಗೆ ಬಂದು ಕೊರೋನಾ ಲಸಿಕೆ ಚುಚ್ಚಿಸಿಕೊಂಡಿದ್ದಾರೆ. ಅದು ಕೂಡ ಭಾರತ್​ ಬಯೋಟೆಕ್​ನ ಕೋವಾಕ್ಸಿನ್​ ಲಸಿಕೆ. ಈ ಲಸಿಕೆಯ ಸುರಕ್ಷತೆ ಬಗ್ಗೆ ವಿಪಕ್ಷಗಳು ಆರಂಭದಿಂದಲೂ ಪ್ರಶ್ನೆ ಮಾಡ್ತಿವೆ. ಆದ್ರೀಗ ಅದೇ ಲಸಿಕೆಯನ್ನ ತಮಿಳುನಾಡು ಆರೋಗ್ಯ ಸಚಿವರು ಚುಚ್ಚಿಸಿಕೊಂಡಿದ್ದಾರೆ. ಜೊತೆಗೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ, ಎಲ್ಲರೂ ಒಟ್ಟಿಗೆ ಸೇರಿ ಕೊರೋನಾವನ್ನ ಸೋಲಿಸೋಣ ಅಂತ ಹೇಳಿದ್ದಾರೆ. ಅಂದ್ಹಾಗೆ ಈಗ ನಡೀತಿರೋ ಮೊದಲ ಹಂತದಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್​ಲೈನ್​ ವರ್ಕರ್ಸ್​ಗೆ ಮಾತ್ರ ಲಸಿಕೆ ಹಾಕಲಾಗ್ತಿದೆ. ಹಾಗಾದ್ರೆ ತಮಿಳುನಾಡಲ್ಲಿ ಸಚಿವರೇಗೆ ಲಸಿಕೆ ಹಾಕ್ಕೊಂಡ್ರು ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ವಿಜಯಭಾಸ್ಕರ್ ವೈದ್ಯರಾಗಿದ್ದಾರೆ. ಇಂಡಿಯನ್ ಮೆಡಿಕಲ್ ಅಸೋಷಿಯೇಷನ್​ನ ಸದಸ್ಯರಾಗಿದ್ದಾರೆ. ಸೋ ಅವರು ಲಸಿಕೆ ಹಾಕಿಸಿಕೊಳ್ಳಬಹುದು. ಹೀಗೆ ವೈದ್ಯರಾಗಿರೋ ರಾಜಕಾರಣಿಗಳು ನಮ್ಮ ರಾಜ್ಯ ಸೇರಿದಂತೆ ವಿವಿಧ ರಾಜ್ಯದಲ್ಲಿದ್ದಾರೆ. ಕೇಂದ್ರ ಸಚಿವರು ಕೂಡ ಇದ್ದಾರೆ. ಅವರು ಕೂಡ ಮುಂದೆ ಬಂದು ಲಸಿಕೆ ಹಾಕ್ಕೊಂಡ್ರೆ ಜನಸಾಮಾನ್ಯರಿಗೂ ಲಸಿಕೆ ಮೇಲೆ ನಂಬಿಕೆ ಬರಬಹುದು. ದೇಶದಲ್ಲಿ ಲಸಿಕೆ ಅಭಿಯಾನ ಮತ್ತಷ್ಟು ವೇಗ ಪಡೀಬಹುದು. ಮೊದಲನೇ ಹಂತ ಬೇಗ ಮುಗಿದು, ಉಳಿದ ಹಂತದ ಲಸಿಕೆ ಅಭಿಯಾನ ಶುರುವಾಗಬಹುದು.

-masthmagaa.com

Contact Us for Advertisement

Leave a Reply