ತಮಿಳುನಾಡಲ್ಲಿ ಮಹಾ ಮಳೆ: ಶಾಲಾ, ಕಾಲೇಜಿಗೆ ರಜೆ.. ಹೈ ಅಲರ್ಟ್

masthmagaa.com:

ಅತ್ತ ತಮಿಳುನಾಡಿನಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಈ ಹಿನ್ನೆಲೆ ಮುದುರೈ ಸೇರಿದಂತೆ ಕೆಲವೊಂದು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮೊನ್ನೆಯಿಂದ ಸುರೀತಿರೋ ಮಳೆಗೆ ತಮಿಳುನಾಡಿನಲ್ಲಿ 5 ಜನ ಪ್ರಾಣ ಕಳ್ಕೊಂಡಿದ್ದಾರೆ. ಇನ್ನು ಮಳೆ ಆರ್ಭಟ ಇರೋವರೆಗೆ ಅಮ್ಮ ಕ್ಯಾಂಟೀನ್​ಗಳ ಮೂಲಕ ಉಚಿತ ಆಹಾರ ಪೂರೈಸಲಾಗುತ್ತೆ ಅಂತ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಘೋಷಿಸಿದ್ದಾರೆ. ಇನ್ನು ಚೆನ್ನೈ ನಗರದಲ್ಲಿ ಮಳೆಯಿಂದ ಮುಳುಗಡೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳದ ಚೆನ್ನೈ ಪಾಲಿಕೆಗೆ ಮದ್ರಾಸ್​ ಹೈಕೋರ್ಟ್ ಚಾಟಿ ಬೀಸಿದೆ. 2015ರ ಪ್ರವಾಹದ ಬಳಿಕ ನೀವು ಏನ್​ ಮಾಡ್ತಿದ್ರಿ ಅಂತ ಪ್ರಶ್ನೆ ಮಾಡಿದೆ. ಅಲ್ಲದೆ ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ ಕೋರ್ಟೇ ಸುಮೋಟೋ ವಿಚಾರಣೆ ನಡೆಸಲಿದೆ ಅಂತ ಎಚ್ಚರಿಸಿದೆ. ಇದರ ನಡುವೆ ನಾಳೆ ನಾಡಿದ್ದು ಮಳೆ ಆರ್ಭಟ ಮತ್ತಷ್ಟು ಹೆಚ್ಚಾಗಲಿದೆ ಅಂತ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡಿನ ಬಹುತೇಕ ಕರಾವಳಿ ಜಿಲ್ಲೆಗಳಲ್ಲಿ ರೆಡ್​ ಅಲರ್ಟ್ ಘೋಷಿಸಿದೆ. ಅಲ್ಲದೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. 11 ಮತ್ತು 12ನೇ ತಾರೀಖು ಕರ್ನಾಟಕದ ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ಕೆಲವೊಂದು ಕಡೆ ಭಾರಿ ಮಳೆಯಾಗೋ ಸಾಧ್ಯತೆ ಇದೆ. ಇನ್ನು ಕೇಂದ್ರಾಡಳಿತ ಪ್ರದೇಶವಾಗಿರೋ ಪುದುಚೆರಿಯಲ್ಲೂ ನಿರಂತರ ಮಳೆ ಹಿನ್ನೆಲೆ ನವೆಂಬರ್​ 11ನೇ ತಾರೀಖಿನವರೆಗೆ ಶಾಲಾ ಕಾಲೇಜಿಗೆ ರಜೆ ನೀಡಲಾಗಿದೆ.

-masthmagaa.com

Contact Us for Advertisement

Leave a Reply