ಪಶ್ಚಿಮ ಬಂಗಾಳದಲ್ಲೂ ಆಡಿಯೋ ಬಾಂಬ್ ಹಾವಳಿ!

masthmagaa.com:

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲೂ ಕೂಡ ಆಡಿಯೋ ಬಾಂಬ್​​​ಗಳ ಸದ್ದು ಜೋರಾಗಿದೆ. ಸಿಎಂ ಮಮತಾ ಬ್ಯಾನರ್ಜಿ ಪಕ್ಷದ ಮಾಜಿ ಕಾರ್ಯಕರ್ತ, ಸುವೇಂದು ಅಧಿಕಾರಿಯ ಆಪ್ತ ಪ್ರೊಲೊಯ್ ಪಾಲ್ ಅವರಿಗೆ ಕರೆ ಮಾಡಿ, ತಮ್ಮ ಪಕ್ಷಕ್ಕೆ ಮರಳುವಂತೆ, ಸಪೋರ್ಟ್ ಮಾಡುವಂತೆ ಮನವಿ ಮಾಡಿದ್ದಾರೆ. ಈ ಸಂಭಾಷಣೆಯ ಆಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಮತ್ತೊಂದ್ಕಡೆ ಬಿಜೆಪಿ ಟ್ರಬಲ್ ಶೂಟರ್ ಮುಕುಲ್ ರಾಯ್ ಮತ್ತೋರ್ವ ನಾಯಕ ಶಿಶಿರ್ ಬಜೋರಿಯಾ ಅವರಿಗೆ ಕರೆ ಮಾಡಿ, ಚುನಾವಣಾ ಆಯೋಗದ ಮೇಲೆ ಹೇಗೆ ಪ್ರಭಾವ ಬೀರೋದು ಅನ್ನೋದರ ಕುರಿತು ಮಾತನಾಡಿರೋ ಆಡಿಯೋವನ್ನು, ಟಿಎಂಸಿ ಬಿಡುಗಡೆ ಮಾಡಿದೆ. ಅಂದ್ರೆ ನಿರ್ದಿಷ್ಠ ಕ್ಷೇತ್ರದ ಹೊರಗೂ ಮತಗಟ್ಟೆ ಏಜೆಂಟ್​​ಗಳು ಕೆಲಸ ಮಾಡಲು ಅವಕಾಶ ನೀಡುವಂತೆ ಚನಾವಣಾ ಆಯೋಗಕ್ಕೆ ಮನವಿ ಮಾಡುವಂತೆ ಈ ಆಡಿಯೋದಲ್ಲಿ ಹೇಳಿದ್ದಾರೆ ಮುಕುಲ್ ರಾಯ್​..

-masthmagaa.com

Contact Us for Advertisement

Leave a Reply