ಶೀಘ್ರ TATA iPhone! ಕೋಲಾರದಲ್ಲಿ ಟಾಟಾ ಐಫೋನ್‌ ತಯಾರು!

masthmagaa.com:

ಭಾರತದಲ್ಲಿ TATA iPhoneಗಳು ಉತ್ಪಾದನೆಯಾಗೋ ಕಾಲ ಮತ್ತಷ್ಟು ಹತ್ತಿರವಾಗಿದೆ. ಈ ಸಂಬಂಧ ಡೀಲನ್ನ ಟಾಟಾ ಗ್ರೂಪ್‌ ಆಲ್ಮೋಸ್ಟ್‌ ಫೈನಲ್‌ ಮಾಡಿದೆ. ಕೋಲಾರದಲ್ಲಿರುವ ವಿಸ್ಟ್ರಾನ್‌ ಕಂಪನಿಯ ಐಫೋನ್ ಅಸೆಂಬ್ಲಿಂಗ್ ಘಟಕವನ್ನ ಖರೀದಿಸಲಿರುವ ಟಾಟಾ ಸಂಸ್ಥೆ, ಮುಂದಿನ ತಿಂಗಳೇ ಒಪ್ಪಂದಕ್ಕೆ ಸಹಿಹಾಕುವ ಸಾಧ್ಯತೆ ಇದೆ. ಈ ಬಗ್ಗೆ ಬ್ಲೂಮ್‌ಬರ್ಗ್‌ ವರದಿ ಮಾಡಿದೆ. ಆಗಸ್ಟ್‌ ತಿಂಗಳಲ್ಲಿ ವಿಸ್ಟ್ರಾನ್‌ ಐಫೋನ್‌ ಫ್ಯಾಕ್ಟರಿಯನ್ನ ಖರೀದಿಸುವ ಒಪ್ಪಂದಕ್ಕೆ ಟಾಟಾ ಸಹಿ ಹಾಕುವ ನಿರೀಕ್ಷೆ ಅಂತ ವರದಿಯಲ್ಲಿ ತಿಳಿಸಲಾಗಿದೆ. ಅಂದಾಜು 5,000 ಕೋಟಿ ರೂ. ಮೌಲ್ಯದ ಈ ಘಟಕದಲ್ಲಿ 10,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದು, ಐಫೋನ್ 14 ಮಾಡೆಲ್​ನ ಫೋನ್​ಗಳ ಅಸೆಂಬ್ಲಿಂಗ್ ಕೆಲಸ ನಡೆಯುತ್ತದೆ. ಈ ಒಪ್ಪಂದ ಯಶಸ್ವಿಯಾದ್ರೆ ಐಫೋನ್ ತಯಾರಿಸುವ ಮೊದಲ ಭಾರತೀಯ ಕಂಪನಿ ಅನ್ನೊ ಹೆಗ್ಗಳಿಕೆ ಟಾಟಾ ಸಂಸ್ಥೆಯದ್ದಾಗುತ್ತೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಮುಂದಿನ ದಿನಗಳಲ್ಲಿ ಟಾಟಾ ಕಂಪನಿ ತಯಾರಿಸಿದ ಐಫೋನ್‌ಗಳು ಗ್ರಾಹಕರ ಕೈ ಸೇರಲಿವೆ. ಟಾಟಾ ಗ್ರೂಪ್‌ನಿಂದ ಐಫೋನ್‌ಗಳ ಉತ್ಪಾದನೆ, ಚೀನಾದ ಮೇಲಿನ ಅವಲಂಬನೆಯನ್ನ ಕಡಿಮೆ ಮಾಡಲು ಹೆಲ್ಪ್‌ ಆಗಲಿದೆ. ಅಲ್ದೇ ಭಾರತದಲ್ಲಿ ಉತ್ಪದಾನೆ ಹೆಚ್ಚಿಸೋಕೆ ಕಾರಣವಾಗುತ್ತೆ. ಅಂದ್ಹಾಗೆ 2008ರಲ್ಲಿ ಐಫೋನ್‌ ಬಿಡುಗಡೆಯಾದಾಗ ಭಾರತದಲ್ಲಿ 50 ಸಾವಿರ ಫೋನುಗಳು ಮಾತ್ರ ಮಾರಾಟವಾಗಿದ್ವು. ಅದೇ 2021ರಲ್ಲಿ ಸುಮಾರು 50 ಲಕ್ಷ ಐಫೋನ್‌ ಮಾರಾಟವಾಗಿದ್ದರೆ, 2022ರಲ್ಲಿ 70 ಲಕ್ಷಕ್ಕೂ ಅಧಿಕ ಫೋನ್‌ ಮಾರಾಟವಾಗಿದೆ. ಹೀಗಾಗಿ ಭಾರತದಲ್ಲಿ ಮಾರ್ಕೆಟ್‌ ಹೆಚ್ಚಾಗುತ್ತಿರೋ ಹಿನ್ನೆಲೆ ಆಪಲ್‌ ಭಾರತದಲ್ಲೇ ಹೆಚ್ಚು ಐಫೋನ್‌ ಉತ್ಪಾದನೆಗೆ ಮುಂದಾಗಿದೆ.

-masthmagaa.com

Contact Us for Advertisement

Leave a Reply