ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಸೋಲು!

masthmagaa.com:

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಿ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಸತತ ಎರಡನೇ ಬಾರಿಗೆ ಟೀಮ್ ಇಂಡಿಯಾದ ಕನಸು ನುಚ್ಚು ನೂರಾಗಿದೆ. 164ಕ್ಕೆ 3ರಲ್ಲಿ 4ನೇ ದಿನವನ್ನ ಅಂತ್ಯ ಮಾಡಿದ್ದ ಭಾರತ ಕೊನೆ ದಿನವಾದ ಇಂದು, ಗೆಲ್ಲಲು 280 ರನ್‌ ಗಳಿಸಬೇಕಿತ್ತು. ಆದ್ರೆ ಕೇವಲ 70 ರನ್‌ ಗಳಿಸುವದ್ರಲ್ಲಿ ಉಳಿದ 7 ವಿಕೆಟ್‌ ಉದುರಿದ್ದರಿಂದ 234ಕ್ಕೆ ಸರ್ವಪತನಗೊಂಡಿದೆ. ಇದರೊಂದಿಗೆ ಆಸ್ಟ್ರೇಲಿಯಾ 209 ರನ್​ಗಳ ಭರ್ಜರಿ ಜಯ ಸಾಧಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಂದ್ಹಾಗೆ 2021ರಲ್ಲಿ ಕೂಡ ನ್ಯೂಜಿಲೆಂಡ್ ವಿರುದ್ಧ ಭಾರತ ಫೈನಲ್​ನಲ್ಲಿ ಸೋಲನುಭವಿಸಿತ್ತು.

-masthmagaa.com

Contact Us for Advertisement

Leave a Reply