ಫೇಸ್​ಬುಕ್​ನಿಂದ ಟ್ರಂಪ್ 2 ವರ್ಷ ಬ್ಯಾನ್​!

masthmagaa.com:

ಫೇಸ್​​ಬುಕ್​​ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​​​​​ರನ್ನು ಮುಂದಿನ 2 ವರ್ಷಗಳ ಕಾಲ ಬ್ಯಾನ್ ಮಾಡಿದೆ. ಜನವರಿ 2023ರವರೆಗೆ ಟ್ರಂಪ್ ಫೇಸ್​ಬುಕ್ಕಲ್ಲಿ ತಮ್ಮ ಆಟ ಹೂಡಂಗಿಲ್ಲ.. ರೂಲ್ಸ್ ಬ್ರೆಕ್ ಮಾಡೋ ವಿಶ್ವನಾಯಕರಿಗೆ ಒಂದು ಕಠಿಣ ಸಂದೇಶ ರವಾನಿಸಲು ಫೇಸ್​ಬುಕ್ ಈ ಹಜ್ಜೆ ಇಟ್ಟಿದೆ. ಜನವರಿ 6ರಂದು ಅಮೆರಿಕದ ಕ್ಯಾಪಿಟಲ್ ಹಿಲ್ ಕಟ್ಟಡದ ಮೇಲೆ ಟ್ರಂಪ್ ಬೆಂಬಲಿಗರು ದಾಳಿ ನಡೆಸಿದ್ರು. ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಟ್ರಂಪ್ ಫೇಸ್​​​ಬುಕ್ ಅಕೌಂಟ್ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಅಮಾನತು ಮಾಡಲಾಗಿತ್ತು. ಈಗ ಅದನ್ನು ಈ ವರ್ಷ ಜನವರಿಯಿಂದ ಮುಂದಿನ 2 ವರ್ಷಗಳಿಗೆ ಅನ್ವಯವಾಗುವಂತೆ ಮುಂದುವರಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಡೊನಾಲ್ಡ್ ಟ್ರಂಪ್, ಇದು ನನಗೆ ಮತ ಹಾಕಿರುವವರಿಗೆ ಮಾಡಿರೋ ಅಪಮಾನ ಅಂತ ಹೇಳಿದ್ದಾರೆ. ಮತ್ತೊಂದ್ಕಡೆ ಕ್ಲಾಸಿಫೈಡ್ ಅಡ್ವರ್​​ಟೈಸಿಂಗ್ ಮಾರ್ಕೆಟ್​​ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಫೇಸ್​ಬುಕ್ ವಿರುದ್ಧ ಯೂರೋಪಿಯನ್ ಒಕ್ಕೂಟ ಮತ್ತು ಬ್ರಿಟನ್​​ ತನಿಖೆ ಆರಂಭಿಸಿದೆ.

-masthmagaa.com

Contact Us for Advertisement

Leave a Reply