ಕಾರು ಅಪಘಾತದಲ್ಲಿ ಮೃತಪಟ್ಟ ತೆಲಂಗಾಣದ BRS ಪಕ್ಷದ ಶಾಸಕಿ!

masthmagaa.com:

ಕಾರು ಅಪಘಾತದಲ್ಲಿ ತೆಲಂಗಾಣದ BRS ಪಕ್ಷದ ಶಾಸಕಿ ಲಾಸ್ಯಾ ನಂದಿತಾ ಮೃತಪಟ್ಟಿದ್ದಾರೆ. ಅಲ್ಲಿನ ಸಂಗಾರೆಡ್ಡಿ ಬಳಿ 37ರ ಹರೆಯದ ಲಾಸ್ಯಾ ಪ್ರಯಾಣಿಸುತ್ತಿದ್ದ ಕಾರ್‌ ಕಂಟ್ರೋಲ್‌ ತಪ್ಪಿ ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಈ ಟೈಮಲ್ಲಿ ಲಾಸ್ಯಾ ಗಂಭೀರವಾಗಿ ಗಾಯಗೊಂಡಿದ್ರು. ಇನ್ನು ಇವ್ರನ್ನ ಸಮೀಪದ ಆಸ್ಪತ್ರೆಗೆ ರವಾನಿಸೋ ವೇಳೆ ಮಾರ್ಗ ಮಧ್ಯ ಸಾವನ್ನಪ್ಪಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ. ಲಾಸ್ಯಾ ಸಾವಿಗೆ ತೆಲಂಗಾಣ ಮಾಜಿ ಸಿಎಂ ಕೆ. ಚಂದ್ರಶೇಖರ್‌ ರಾವ್ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇನ್ನು ಅತ್ತ ಮಹಾರಾಷ್ಟ್ರದ ಮಾಜಿ ಸಿಎಂ, ಶಿವಸೇನೆ ನಾಯಕ ಮನೋಹರ್‌ ಜೋಶಿ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲ್ತಿದ್ದ 86 ವಯಸ್ಸಿನ ಜೋಶಿ ಅವ್ರನ್ನ ಎರಡು ದಿನಗಳ ಹಿಂದೆ ಅಲ್ಲಿನ ಹಿಂದುಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸಿದೇ ಅವರು ಸಾವನ್ನಪ್ಪಿದ್ದಾರೆ.

-masthmagaa.com

Contact Us for Advertisement

Leave a Reply