ದೇಶದಲ್ಲಿ ಹಿಂದಿ ಗಲಾಟೆ ಜೋರು!

masthmagaa.com:

ಈ ಹಿಂದೆ ಕೇಂದ್ರ ಗೃಹಸಚಿವ ಅಮಿತ್‌ ಶಾ ರಾಜ್ಯ ರಾಜ್ಯಗಳ ನಡುವೆ ಮಾತುಕತೆಯ ಇಂಗ್ಲೀಷ್‌ ಬದಲಿಗೆ ಹಿಂದಿ ಬಳಸಿ ಅಂತ ಹೇಳಿದ್ದು ಈಗ ವಿವಾದದ ಕೇಂದ್ರಬಿಂದುವಾಗಿದೆ. ಇದೀಗ ಈ ಹೇಳಿಕೆ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳಲ್ಲಿ ತೀವ್ರವಾದ ವಿರೋಧ ಕೇಳಿ ಬರ್ತಾ ಇದೆ. ಆ ಲಿಸ್ಟ್​​ಗೆ ಈಗ ತೆಲಂಗಾಣ, ತಮಿಳುನಾಡು ಮತ್ತು ಕೇರಳ ಕೂಡ ಸೇರಿದೆ. ತೆಲಂಗಾಣ ಸಚಿವ ಕೆ.ಟಿ ರಾಮ ರಾವ್‌ ಪ್ರತಿಕ್ರಿಯಿಸಿ, ವಿವಿಧತೆಯಲ್ಲಿ ಏಕತೆ ಭಾರತದ ಶಕ್ತಿ. ಭಾಷಾ ಮತೀಯತೆಯನ್ನ ಹರಡಬಾರದು ಅಂತ ಕಿಡಿಕಾರಿದ್ದಾರೆ. ಅದೇ ರೀತಿ ತಮಿಳುನಾಡು ಸಿಎಂ ಸ್ಟಾಲಿನ್ ಪ್ರತಿಕ್ರಿಯಿಸಿ, ನಮ್ಮದು ವಿವಿಧತೆಯಲ್ಲಿ ಏಕತೆಯನ್ನ ಹೊಂದಿರುವ ದೇಶ. ಆದ್ರೆ ಈಗ ವಿವಿಧತೆಯನ್ನ ತೆಗೆದು ಹಾಕಿ ಏಕತ್ವವನ್ನ ಮಾತ್ರ ಉಳಿಸುವ ಪ್ರಯತ್ನಗಳು , ಕೆಲಸಗಳು ನಡಿತಾ ಇದೆ ಅಂತ ಹೇಳಿದ್ದಾರೆ. ಕೇರಳ ಸಿಎಂ ಪಿಣರಾಯ್‌ ವಿಜಯನ್‌ ಪ್ರತಿಕ್ರಿಯಿಸಿ, ಹಿಂದಿ ಹೇರಿಕೆಯನ್ನ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply