‘ತೆಲುಗು ನಟ ಚಿರಂಜೀವಿಗೆ ಕ್ಯಾನ್ಸರ್?’ ವದಂತಿಗಳಿಗೆ ತೆರೆ ಎಳೆದ ಮೆಗಾಸ್ಟಾರ್ !

masthmagaa.com:

ಟಾಲಿವುಡ್‌ನ ಮೆಗಾ ಸ್ಟಾರ್‌ ಚಿರಂಜೀವಿ ಸಿಕ್ಕಾಪಟ್ಟೆ ಫೇಮಸ್‌ ಆಕ್ಟರ್‌ ಅಂತ ಎಲ್ಲರಿಗೂ ಗೊತ್ತು. ಟಾಲಿವುಡ್‌ ಮಾತ್ರ ಅಲ್ಲ ಕನ್ನಡ ಇಂಡಸ್ಟ್ರಿಯಲ್ಲೂ ಅವರ ಫ್ಯಾನ್ಸ್‌ಗೆನೂ ಕಡಿಮೆ ಇಲ್ಲ. ಸದ್ಯ ಕೆಲವು ನ್ಯೂಸ್‌ ಚಾನೆಲ್ಸ್‌ ಮತ್ತು ಇಂಡಸ್ಟ್ರಿಯಲ್ಲಿ ಚಿರಂಜೀವಿ ಅವರಿಗೆ ಕ್ಯಾನ್ಸರ್‌ ಇದೆ ಅಂತ ಸುದ್ದಿ ಹರಡಿತ್ತು. ಚಿರಂಜೀವಿ ಅವರ ಫ್ಯಾನ್ಸ್‌ಗೆಲ್ಲಾ ಇದು ಬ್ಯಾಡ್‌ ನ್ಯೂಸ್‌ ಆಗಿತ್ತು. ಈ ಕ್ಯಾನ್ಸರ್‌ ಇದೆ ಅಂತ ಸ್ಪ್ರೇಡ್‌ ಆದಂತ ನ್ಯೂಸ್‌ ಬಗ್ಗೆ ಚಿರಂಜೀವಿ ಸ್ವತಃ ಕ್ಲಾರಿಫಿಕೇಷನ್‌ ಕೊಟ್ಟಿದ್ದಾರೆ.

ಟ್ವಟಿರ್‌ನಲ್ಲಿ ಟ್ವೀಟ್‌ ಮಾಡೋ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ. “ಇನ್ನು ಇತ್ತಿಚೀಗೆ ಒಂದು ಕ್ಯಾನ್ಸರ್‌ ಸೆಂಟರ್‌ ಒಪನಿಂಗ್‌ ಸೆರಮನಿಯಲ್ಲಿ ಭಾಗವಹಿಸಿದ್ದೆ. ಆ ಟೈಮ್‌ನಲ್ಲಿ ಕ್ಯಾನ್ಸರ್‌ ಜಾಗೃತಿ ಬಗ್ಗೆ ಮಾತಾಡಿದ್ದೆ. ಆಗಾಗ ಪರೀಕ್ಷೆ ಮಾಡಿಸಿಕೊಳ್ತಾ ಇರಿ, ಕ್ಯಾನ್ಸರ್‌ ಲಕ್ಷಣಗಳು ಏನಾದ್ರೂ ಇದ್ರೆ ಗೊತ್ತಾಗತ್ತೆ. ನಾನೂ ಕೂಡ ಪರೀಕ್ಷೆ ಮಾಡಿಸ್ದೆ. ಒಂದು ಸಣ್ಣ ಗಡ್ಡೆ ತರ ಇತ್ತು. ಆದ್ರೆ ಅದು ಕ್ಯಾನ್ಸರ್‌ ಅಲ್ಲ. ಆ ಗಡ್ಡೆನ ತೆಗೆಸಲಾಯ್ತು. ನಾನ್‌ ಏನಾದ್ರು ಟೆಸ್ಟ್‌ ಮಾಡಿಸಿಕೊಳ್ದೆ ಇದ್ದಿದರೆ ಆ ಗಡ್ಡೆ ಕ್ಯಾನ್ಸರ್‌ ಆಗೋ ಚಾನ್ಸಸ್‌ ಇರ್ತಿತ್ತು. ಕೆಲವು ಮಾಧ್ಯಮದವ್ರು ಇದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳದೇ ನನಗೆ ಕ್ಯಾನ್ಸರ್‌ ಆಗಿದೆ ಮತ್ತು ಚಿಕಿತ್ಸೆಯಿಂದ ನಾನು ಬದುಕಿದ್ದೇನೆ ಅಂತೆಲ್ಲಾ ನ್ಯೂಸ್‌ ಮಾಡಿದ್ರು. ನನಗೆ ಬೇಕಾದವರೆಲ್ಲಾ ಶಾಕ್‌ ಆಗಿ ಕಾಲ್‌, ಮೆಸೇಜ್‌ ಮಾಡಿ ಕೇಳ್ತಾ ಇದ್ರು. ವಿಷಯ ಏನೂ ಅಂತ ತಿಳಿದೇ ಈ ರೀತಿ ನ್ಯೂಸ್‌ಗಳನ್ನ ಮಾಡಬೇಡಿ. ಇದರಿಂದ ಅನೇಕ ಜನರಿಗೆ ಭಯ ಮತ್ತೆ ನೋವಾಗತ್ತೆ” ಅಂತ ಬರೆದುಕೊಂಡಿದ್ದಾರೆ.

ಇನ್ನು ಮೆಗಾಸ್ಟಾರ್‌ ಚಿರಂಜೀವಿ ಅವರು ಆರಾಮಾಗಿ ಇದ್ದಾರೆ ಅನ್ನೋ ನ್ಯೂಸ್‌ ಕೇಳಿ ಅವರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. “ಈ ವಿಷಯವನ್ನು ನೀವು ಸ್ಪಷ್ಟಪಡಿಸಿದ್ದು ಒಳ್ಳೆಯದಾಯಿತು. ಇಲ್ಲದಿದ್ದರೆ ಆತಂಕ ಹೆಚ್ಚುತ್ತಿತ್ತು” ಎಂದು ಅನೇಕರು ಕಾಮೆಂಟ್​ ಮಾಡಿದ್ದಾರೆ. “ಜಿರಂಜೀವಿ ಅವರು ನೂರಾರು ವರ್ಷ ಆರೋಗ್ಯವಾಗಿ ಇರಲಿ” ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

ಅನೇಕ ಸೆಲೆಬ್ರಿಟಿಗಳಿಗೆ ಕ್ಯಾನ್ಸರ್​ ಬಂದ ಉದಾಹರಣೆ ಇದೆ. ಆರಂಭದಲ್ಲಿಯೇ ಕ್ಯಾನ್ಸರ್​ ಪತ್ತೆಯಾದರೆ ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಬಹುದು. ಮನಿಶಾ ಕೊಯಿರಾಲಾ, ಸೊನಾಲಿ ಬೇಂದ್ರೆ, ಯುವರಾಜ್​ ಸಿಂಗ್​, ಕಿರಣ್​ ಖೇರ್​, ರಾಕೇಶ್​ ರೋಷನ್​ ಮುಂತಾದವರು ಕ್ಯಾನ್ಸರ್​ಅನ್ನ ಗೆದ್ದು ಬಂದಿದ್ದಾರೆ. ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗ್ತಾ ಇದೆ.

-masthmagaa.com

Contact Us for Advertisement

Leave a Reply