ಕೋವಿಶೀಲ್ಡ್​​​​ ಲಸಿಕೆ 2 ಡೋಸ್ ಅಂತರ 45 ವಾರಕ್ಕೆ ವಿಸ್ತರಿಸಬಹುದು: ಅಧ್ಯಯನ

masthmagaa.com:

ಕೋವಿಶೀಲ್ಡ್​ ಲಸಿಕೆಯ ಎರಡು ಡೋಸ್​​ಗಳ ನಡುವಿನ ಅಂತರ 45 ವಾರದವರೆಗೂ ವಿಸ್ತರಿಸಬಹುದು.. ಇದ್ರಿಂದ ಹೆಚ್ಚಿನ ಪ್ರಮಾಣದ ಪ್ರತಿಕಾಯಗಳು ಸೃಷ್ಟಿಯಾಗುತ್ತವೆ ಅಂತ ಆಕ್ಸ್​​ಫರ್ಡ್​​ ಯುನಿವರ್ಸಿಟಿಯ ಅಧ್ಯಯನವೊಂದು ಹೇಳಿದೆ. 28 ದಿನಗಳ ಅಂತರದಲ್ಲಿ 2 ಡೋಸ್​ ಪಡೆದವರಿಗೆ ಹೋಲಿಸಿದ್ರೆ 12 ವಾರಗಳ ಅಂತರದಲ್ಲಿ 2ನೇ ಡೋಸ್​ ಪಡೆದವರಲ್ಲಿ 4 ಪಟ್ಟು ಹೆಚ್ಚು ರೋಗ ನಿರೋಧಕ ಶಕ್ತಿ ವೃದ್ಧಿಯಾಗಿದೆ. ಅದೇ ರೀತಿ 45 ವಾರಗಳ ಅಂತರದಲ್ಲಿ 2ನೇ ಡೋಸ್ ಪಡೆದವರಲ್ಲಿ 18 ಪಟ್ಟು ಹೆಚ್ಚು ರೋಗ ನಿರೋಧಕ ಶಕ್ತಿ ವೃದ್ಧಿಯಾಗಿದೆ ಅಂತ ಗೊತ್ತಾಗಿದೆ. ಜೊತೆಗೆ 3ನೇ ಡೋಸ್ ಲಸಿಕೆಯಿಂದಲೂ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ. 3ನೇ ಡೋಸ್​​ನ್ನು 2ನೇ ಡೋಸ್ ಪಡೆದ 6 ತಿಂಗಳ ಬಳಿಕ ನೀಡಿದ್ರೆ ಇಮ್ಯೂನಿಟಿ ಪವರ್ ಜಾಸ್ತಿಯಾಗುತ್ತೆ ಅಂತ ಕೂಡ ಅಧ್ಯಯನದಲ್ಲಿ ಹೇಳಲಾಗಿದೆ. ಈ ನಡುವೆ ಅಮೆರಿಕದ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಹೆಲ್ತ್​​ ನಡೆಸಿದ ಮತ್ತೊಂದು ಅಧ್ಯಯನದ ಪ್ರಕಾರ ಭಾರತ್ ಬಯೋಟೆಕ್​​ನ ಕೋವ್ಯಾಕ್ಸಿನ್ ಲಸಿಕೆ ಅಲ್ಫಾ, ಡೆಲ್ಟಾ ರೂಪಾಂತರಿ ವೈರಾಣುವನ್ನು ಮಟ್ಟಹಾಕುವಲ್ಲಿಯೂ ಪರಿಣಾಮಕಾರಿ ಅಂತ ಗೊತ್ತಾಗಿದೆ. ಅದೇ ರೀತಿ ನಿನ್ನೆಯಷ್ಟೇ ಭಾರತಕ್ಕೆ ಆಮದು ಮಾಡಿಕೊಳ್ಳಲು ಅನುಮತಿ ಸಿಕ್ಕಿರೋ ಮಾಡೆರ್ನಾ ಲಸಿಕೆ ಕೂಡ ಡೆಲ್ಟಾ ವಿರುದ್ಧ ಪರಿಣಾಮಕಾರಿ ಅಂತ ಸಂಸ್ಥೆ ಹೇಳಿಕೊಂಡಿದೆ.

-masthmagaa.com

Contact Us for Advertisement

Leave a Reply