ನಮ್ಮಲ್ಲಿ ಒಂದೇ ಒಂದು ಕೊರೋನಾ ಪತ್ತೆಯಾಗಿಲ್ಲ: ಉತ್ತರ ಕೊರಿಯಾ

masthmagaa.com:

ಕಿಮ್ ಜಾಂಗ್ ಉನ್ ರ ಉತ್ತರ ಕೊರಿಯಾ ವಿಶ್ವ ಆರೋಗ್ಯ ಸಂಸ್ಥೆಗೆ ಒಂದು ರಿಪೋರ್ಟ್ ಸಬ್ಮಿಟ್ ಮಾಡಿದೆ. ಅದರಲ್ಲಿ ಇದುವರೆಗೂ ನಮ್ಮ ದೇಶದಲ್ಲಿ ಒಂದೇಒಂದು ಕೊರೋನ ಕೇಸ್ ಬಂದಿಲ್ಲ ಅಂತ ಹೇಳಿದೆ. ಜೂನ್ 30ರ ವರೆಗೂ ನಾವು ಒಟ್ಟು 30,000 ಕೊರೋನ ಪರೀಕ್ಷೆಗಳನ್ನ ನಡೆಸಿದ್ದೇವೆ. ಇದರಲ್ಲಿ ಒಂದೇ ಒಂದು ಪಾಸಿಟಿವ್ ಬಂದಿಲ್ಲ ಅಂತ ಕಿಮ್ ಜಾಂಗ್ ಉನ್ ಸರ್ಕಾರ ಹೇಳಿದೆ. ಅದರಲ್ಲೂ ಜೂನ್ 4ರಿಂದ10 ರವರೆಗೆ ನಾವು 733 ಪರೀಕ್ಷೆಗಳನ್ನ ಮಾಡಿದ್ದೇವೆ. ಅವರಲ್ಲಿ 149 ಜನಕ್ಕೆ ಇನ್ಫೂಯೆಂಜಾ ಥರ ಕಾಯಿಲೆ ಹಾಗೂ ಗಂಭೀರ ಉಸಿರಾಟ ಸಂಬಂಧಿ ಸೋಂಕು ಇತ್ತು ಅಂತ ಹೇಳಿದೆ. ಅರೆ, ಹಾಗಾದ್ರೆ ಇದು ಕೊರೋನ ಲಕ್ಷಣ ಅಲ್ವಾ ಅಂತ ಕೇಳಿದ್ರೆ., ನೋ.. ನೋ… ಕೊರೋನ ಮಾತ್ರ ಅಲ್ಲ.. ನಮ್ಮಲ್ಲಿ ಕೊರೋನ ಒಂದೂ ಕೇಸ್ ಬಂದಿಲ್ಲ ಅಂತಾನೇ ವಾದಿಸಿದೆ.

ಆದ್ರೆ ಈ ವಾದವನ್ನ ತಜ್ಞರು ಒಪ್ತಾಇಲ್ಲ. ಕಿಮ್ ಜಾಂಗ್ ಆಡಳಿತ ಸುಳ್ಳು ಹೇಳ್ತಿದೆ ಅನ್ನೋದೆ ಎಲ್ಲರ ಅಭಿಮತ. ಉತ್ತರ ಕೊರಿಯಾದಲ್ಲಿ ಬೇಸಿಕಲಿ ಆರೋಗ್ಯ ಸೇವೆಗಳೇ ಸರಿ ಇಲ್ಲ. ಜೊತೆಗೆ ಕಾಯಿಲೆ ತವರು ಚೀನಾದೊಂದಿಗೆ ಲೂಸ್ ಲೂಸ್ ಬಾರ್ಡರ್ ಹೊಂದಿದ್ದಾರೆ. ಜೊತೆಗೆ ರಷ್ಯಾ ಬಿಟ್ರೆ ಚೀನಾ ಈ ಕೊರಿಯಾದ ಏಕೈಕ ದೊಡ್ಡ ಆಪ್ತಮಿತ್ರ. ಸೋ ಕೊರೋನ ಬಂದಿರುತ್ತೆ. ಆದ್ರೆ ಕಿಮ್ ಜಾಂಗ್ ಅದನ್ನ ಬಹಿರಂಗಪಡಿಸ್ತಿಲ್ಲ ಅಷ್ಟೆ ಅಂತ ನಂಬಲಾಗಿದೆ.

ನಮ್ಮ ಕೊರೋನ ನಿರ್ಬಂಧಗಳು ದೇಶದ ಉಳಿವಿಗೆ ಅಗತ್ಯ ಅಂತ ಹೇಳಿರೋ ಕಿಮ್ ಜಾಂಗ್ ಉನ್ ಇಡೀ ದೇಶವನ್ನ ಬಾಕ್ಸ್ ಪ್ಯಾಕ್ ಮಾಡಿಟ್ಟಂತೆ ಲಾಕ್ ಮಾಡಿಟ್ಟಿದ್ದಾರೆ. ದೇಶದಲ್ಲಿದ್ದ ಕೆಲವೇ ದೇಶಗಳ ರಾಯಬಾರಿಗಳು ಸೇರಿದಂತೆ ವಿದೇಶಿಯರನ್ನ ವಿಮಾನ ಹತ್ತಿಸಿ ದೇಶದಿಂದ ಹೊರ ಕಳಿಸಿದ್ದಾರೆ. ಹೊರಗಿಂದ ಯಾರೂ ಬರದಂತೆ ಬ್ಯಾನ್ ಮಾಡಿದ್ದಾರೆ. ವ್ಯಾಪಾರದ ಏಕೈಕ ಕೊಂಡಿಯಾಗಿದ್ದ ಚೀನಾ ಜೊತೆನೂ ಸಂಪರ್ಕ ಕಟ್ ಮಾಡಿದ್ದಾರೆ. ಜೊತೆಗೆ ಈ ನಿರ್ಬಂಧಗಳು ಇನ್ನೂ ಬಹಳ ಕಾಲ ಇರುತ್ತೆ ಅನ್ನೋ ಸಂಕೇತ ಕೂಡ ನೀಡಿದ್ದಾರೆ. ಇದರ ಪರಿಣಾಮ ಆಲ್ರೆಡಿ ಅಮೆರಿಕ ಮತ್ತು ಮಿತ್ರರು ಹೇರಿದ್ದ ನಿರ್ಬಂಧಗಳಿಂದ ಸೊರಗಿದ್ದ ಕೊರಿಯಾ ಆರ್ಥಿಕತೆ ಈಗ ಸಂಪೂರ್ಣ ಹಳ್ಳ ಹಿಡಿದಿದೆ.

-masthmagaa.com

Contact Us for Advertisement

Leave a Reply